Advertisement

ಸಂಘಗಳ ಉತ್ಪನ್ನಕ್ಕೆ ಮಾರುಕಟ್ಟೆ ಅತ್ಯಗತ್ಯ

06:51 AM Jul 09, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಸಿದಟಛಿಪಡಿಸುತ್ತಿರುವ ಉತ್ಪನ್ನಗಳಿಗೆ ಬ್ರ್ಯಾಂಡ್‌ ಮೂಲಕ ಜನರಿಗೆ ತಲುಪಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗ ಬೇಕೆಂದು ಮಾಜಿ ಕೃಷಿ ಸಚಿವ, ಗೌರಿಬಿದನೂರು  ಶಾಸಕ ಎನ್‌.ಎಚ್‌.ಶಿವಶೆಂಕರರೆಡ್ಡಿ ತಿಳಿಸಿದರು.

Advertisement

ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಸಂಜೀವಿನಿ ಕುಟೀರ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘಗಳು  ರಚನೆಗೊಂಡ ನಂತರ ಮಹಿಳೆ ಯರು ಸ್ವಾವಲಂಬಿ ಜೀವನದೊಂದಿಗೆ ಕುಟುಂಬದ ಆರ್ಥಿಕತೆಯು ಸುಧಾರಿಸುವು ದರಲ್ಲಿ ಹೆಚ್ಚಿನ ಮಹತ್ವವನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು.

ಸ್ವ ಸಹಾಯ ಸಂಘಗಳ ಸದಸ್ಯರು ತಯಾರಿಸುವ  ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಯನ್ನು ಒದಗಿಸಬೇಕು ಮತ್ತು ತಯಾರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದು ಕೊಳ್ಳಲು ಅವಶ್ಯವಾದ ಸಹಾಯ ಹಾಗೂ ಸಹಕಾರವನ್ನು ನೀಡಬೇಕೆಂದರು. ಗುಣಮಟ್ಟ  ಕಾಯ್ದುಕೊಳ್ಳುವುದರೊಂದಿಗೆ ಉತ್ಪನ್ನಗಳಿಗೆ ನಿಗದಿತ ಬ್ರ್ಯಾಂಡ್‌ ನೀಡುವ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಆಗಬೇಕು.

ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಬೇಕೆಂದರು. ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌  ಮಾತನಾಡಿ, ಸಂಘ ವೆಂಬುದು ಸ್ವಾವಲಂಬಿ ತನವೇ ಅಲ್ಲದೆ, ಉತ್ತಮ ಆರ್ಥಿಕ ಆಡಳಿತ ವ್ಯವಸ್ಥೆಯ ಪರಿ ಚಯವನ್ನು ಮಹಿಳೆಯರಿಗೆ ಮಾಡಿಕೊಡು ತ್ತದೆ. ಇದರಿಂದ ಬ್ಯಾಂಕ್‌ ಹಣ ಕಾಸು ವ್ಯವಹಾರದ ಜ್ಞಾನವನ್ನು ನೀಡು ವುದಲ್ಲದೆ, ಆಧುನಿಕತೆಯೊಂದಿಗಿನ ಅಭಿವೃದಿಯ ಕಡೆಗೆ ಮಹಿಳೆ ನಡೆಯುವಲ್ಲಿ ಸಹಾಯವಾಗುತ್ತದೆ ಎಂದರು.

ತಾಪಂ ಅಧ್ಯಕ್ಷ ಆರ್‌.ಲೋಕೇಶ್‌, ಇಒ ಎನ್‌.ಮುನಿರಾಜ್‌, ಸ್ವಸಹಾಯ ಗುಂಪಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next