ಮುಂಬಯಿ : ಇಂದು ಪ್ರಕಟಗೊಳ್ಳಲಿರುವ ಆರ್‌ಬಿಐ ಹಣಕಾಸು ನೀತಿ ಆಶಾದಾಯಕವಾಗಿರುವುದೆಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಪೇಟೆ ಇಂದು ಬುಧವಾರ ಆರಂಭಿಕ ವಹಿವಾಟಿನಲ್ಲಿ 99 ಅಂಕಗಳ ಜಿಗಿತವನ್ನು ಕಂಡಿತು.
ಬೆಳಗ್ಗೆ 12 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 125.99 ಅಂಕಗಳ ಮುನ್ನಡೆಯೊಂದಿಗೆ 31,316.55 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.25 ಅಂಕಗಳ ಮುನ್ನಡೆಯೊಂದಿಗೆ 9,670.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ 118.93 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ವೇದಾಂತ, ಮಾರುತಿ ಸುಜುಕಿ, ಇನ್‌ಫೋಸಿಸ್, ಟಿಸಿಎಸ್ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಮಹೀಂದ್ರ, ಸನ್ ಫಾರ್ಮಾ, ಎಚ್‌ಯುಎಲ್, ವೇದಾಂತ, ಅರಬಿಂದೋ ಫಾರ್ಮಾ ಟಾಪ್ ಗೇನರ್ ಎನಿಸಿಕೊಂಡರೆ, ಬಿಪಿಸಿಎಲ್, ಎಸ್ ಬ್ಯಾಂಕ್, ಟಾಟಾ ಮೋಟರ್, ಟಿಸಿಎಸ್, ವಿಪ್ರೋ ಟಾಪ್ ಲೂಸರ್ ಎನಿಸಿಕೊಂಡವು.