ಜಾಮ್ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ.
Advertisement
ಮುಖ್ಯವಾಗಿ ಸಂತೆಗೆ ಬರುವ ದ್ವಿಚಕ್ರ ವಾಹನ ಸವಾರರು ರಸ್ತೆ ಮೇಲೆಯೇ ಅದನ್ನು ಇರಿಸಿ ತೆರಳುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ.,ಅಲ್ಲದೆ ಕೆಲವು ಕಾರು ಮಾಲಕರು ಸಹ ರಸ್ತೆ ಮೇಲೆ ನಿಲ್ಲಿಸುವುದರಿಂದ ಸಂಚಾರಿ ವ್ಯವಸ್ಥೆ ಅಸ್ತವ್ಯಸ್ಥಗೊಳ್ಳುತ್ತಿದೆ.
ಪ್ರಸ್ತುತ ಸಂತೆಗೆ ಬರುವ ಬಹುತೇಕ ಮಂದಿ ಕಾರುಗಳನ್ನು ಗಾಂಧಿ ಮೈದಾನದಲ್ಲಿ ಪಾರ್ಕ್ ಮಾಡುತ್ತಿದ್ದಾರೆ. ಆದರೆ ಸಂತೆ ಮಾರುಕಟ್ಟೆ ಎದುರು ಗಾಂಧಿಮೈದಾನಕ್ಕೆ ತೆರಳುವ ದಾರಿ ತೀರಾ ಕಿರಿದಾಗಿರುವುದರಿಂದ ಟ್ರಾಫಿಕ್ ನಿಲುಗಡೆ ಆಗುತ್ತಿದೆ. ಅಲ್ಲಿಯೇ ರಿಕ್ಷಾಗಳು ಸಾಲುಗಟ್ಟಿ ನಿಂತಿರುವುದರಿಂದ ಮತ್ತಷ್ಟು ಸಮಸೆಯಾಗುತ್ತಿದೆ. ರಸ್ತೆ ಮೇಲೆ ವ್ಯಾಪಾರ
ಆಕಾಶವಾಣಿಯಿಂದ ರಥಬೀದಿಯ ತನಕ ಹಣ್ಣು, ತರಕಾರಿ ಸೇರಿದಂತೆ ಹಲವು ವಸ್ತುಗಳನ್ನು ರಸ್ತೆ ಮೇಲೆಯೇ ವ್ಯಾಪಾರ ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ಜಾಗ ವಿಸ್ತರಿಸಿ ಅವಕಾಶ ಕಲ್ಪಿಸಿದರೆ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಸಂತೆ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವಂತೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.