ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿನ ಋಣಾತ್ಮಕ ಸುಳಿವುಗಳನ್ನು ಅನುಸರಿಸಿ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 50.95 ಅಂಕಗಳ ನಷ್ಟದೊಂದಿಗೆ 31,904.40 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.30 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,873.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮನೋಪ್ರಾಬಲ್ಯದ ಮಟ್ಟವಾಗಿ 32,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿರುವುದು ಇಂದಿನ ವಹಿವಾಟಿನ ಮುಖ್ಯ ಸಂಗತಿ ಎನಿಸಿಕೊಂಡಿತು.
ಇಂದಿನ ವಹಿವಾಟಿನಲ್ಲಿ 1,434 ಶೇರುಗಳು ಹಿನ್ನಡೆಗೆ ಗುರಿಯಾದರೆ 1,284 ಶೇರುಗಳು ಮುನ್ನಡೆ ಕಂಡವು. 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಎಕ್ಸಿಸ್ ಬ್ಯಾಂಕ್ 540 ರೂ., ಒಎನ್‌ಜಿಸಿ 165.85, ಎಚ್ ಡಿ ಎಫ್ ಸಿ 1,710.90, ಮಹೀಂದ್ರ 1,393.45, ಸಿಪ್ಲಾ 571.90.
ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್ 557.20, ಭಾರ್ತಿ ಇನ್‌ಫ್ರಾಟೆಲ್ 406.10, ಅರಬಿಂದೋ ಫಾರ್ಮಾ 750.50, ಬ್ಯಾಂಕ್ ಆಫ್ ಬರೋಡ 161.90, ಅಲ್‌ಟ್ರಾ ಟೆಕ್ ಸಿಮೆಂಟ್ 4,141.70 ರೂ.