Advertisement

60 ಸಾವಿರ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, 18 ಸಾವಿರ ಸಮೀಪಕ್ಕೆ ನಿಫ್ಟಿ

05:23 PM Oct 11, 2021 | Team Udayavani |

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ(ಅಕ್ಟೋಬರ್ 11) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ.

Advertisement

ಇದನ್ನೂ ಓದಿ:ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಉದ್ಯೋಗ ನೀತಿ’ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 76.72 ಅಂಕ ಏರಿಕೆಯಾಗಿದ್ದು, 60,135.78 ಅಂಕಗಳ ಸಾರ್ವಕಾಲಿಕ ಗರಿಷ್ಠ ಹೆಚ್ಚಳದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 50.80 ಅಂಕ ಏರಿಕೆಯಾಗಿದ್ದು, 17,946ರ ಗಡಿ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪೋರೇಷನ್ ಷೇರುಗಳು ಲಾಭಗಳಿಸಿವೆ. ಟಿಸಿಎಸ್, ಟೆಕ್ ಮಹೀಂದ್ರ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿವೆ.

ಬ್ಯಾಂಕಿಂಗ್, ಆಟೋ, ಪವರ್ ಸೆಕ್ಟರ್ ಗಳ ಷೇರುಗಳು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಗಳಿಸಿದ್ದು, ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದ ಪರಿಣಾಮ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ, ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next