Advertisement

ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ ಭರ್ತಿ

02:18 PM Nov 22, 2021 | Team Udayavani |

ಬಂಗಾರಪೇಟೆ: ಕೋಲಾರದ ಮಿನಿ ಕೆಆರ್‌ ಎಸ್‌ ಎಂದು ಖ್ಯಾತಿ ಇರುವ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ ಸುಮಾರು 17 ವರ್ಷಗಳ ನಂತರ ಕೋಡಿ ಹರಿದಿದ್ದು, ನೀರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

Advertisement

1936ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಮೈಸೂರಿನ ಕೆ.ಆರ್‌.ಎಸ್‌ ಮಾದರಿ ಯಲ್ಲಿ ನಿರ್ಮಿಸಿರುವ ಬೂದಿ ಕೋಟೆಯ ಮಾರ್ಕಂಡೇಯ ಡ್ಯಾಂ 2004ರ ನಂತರ ತುಂಬಿರಲಿಲ್ಲ. ಈ ಡ್ಯಾಂಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸಿ ತುಂಬಿಸಬೇಕು ಎಂದು ಕೆ.ಸಿ ವ್ಯಾಲಿ ಯೋಜನೆಯಲ್ಲಿ ಸೇರಿಸಲಾಗಿತ್ತು.

ಇದನ್ನೂ ಓದಿ:- ಮಳೆ ಹಿನ್ನೆಲೆ ಮನೆಗೋಡೆ ಕುಸಿದು ವ್ಯಕ್ತಿ ಸಾವು

ಆದರೆ, ಕೆ.ಸಿ ವ್ಯಾಲಿ ನೀರು ಹರಿಯಲೇ ಇಲ್ಲ. ಬದಲಿಗೆ ಇತ್ತೀಚೆಗೆ ಸುರಿದ ಮಳೆಗೆ ಡ್ಯಾಂ ಕೋಡಿ ಹರಿದಿದ್ದು, ಈ ಭಾಗದ ಜನರಿಗೆ ಸಂತಸ ತಂದಿದೆ. ಇತ್ತ ಡ್ಯಾಂ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೋಲಾರ ಶಾಸಕ ಶ್ರೀನಿವಾಸಗೌಡ ಸಹ ಮಾರ್ಕಂಡೇಯ ಡ್ಯಾಂಗೆ ಭೇಟಿ ನೀಡಿ ಸಂತಸಪಟ್ಟರು.

ಡ್ಯಾಂಗೆ ಬರುವ ರಸ್ತೆ ಸಂಪೂರ್ಣ ಹಾಳು: ಶಾಸಕ ಶ್ರೀನಿವಾಸಗೌಡ ಮಾತನಾಡಿ, 17 ವರ್ಷದ ನಂತರ ಡ್ಯಾಂ ಕೋಡಿ ಹರಿದಿದೆ. ಯರಗೋಳ್‌ ಜೊತೆಗೆ ಮಾರ್ಕಂಡೇಯ ಡ್ಯಾಂ ನೀರನ್ನು ಆದ್ಯತೆ ಮೇರೆಗೆ ಕುಡಿಯಲು ಬಳಸಲಾಗುತ್ತದೆ. ಕುಡಿಯಲು ಬಳಸಿ ಉಳಿದ ನೀರನ್ನು ಭತ್ತ ಬೆಳೆಗೆ ಬಳಸಲು ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Advertisement

ಯರಗೋಳ್‌ ಡ್ಯಾಂಗೆ 80 ಅಡಿ ನೀರು ಬಂದಿದ್ದು, ಮಾರ್ಕಂಡೇಯ ಡ್ಯಾಂ ನೀರು ಹೋದರೆ ಬೇಗ ತುಂಬಲಿದೆ. ಮುಖ್ಯಮಂತ್ರಿಗಳನ್ನು ಕರೆಸಿ ಯರಗೋಳ್‌ ಡ್ಯಾಂ ಹಾಗೂ ಮಾರ್ಕಂಡೇಯ ಡ್ಯಾಂಗೆ ಪೂಜೆ ಮಾಡಿಸಲಾಗುತ್ತದೆ. ಮಾರ್ಕಂಡೇಯ ಡ್ಯಾಂಗೆ ಬರುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ಮುಂದಿನ ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ಥಾಪಿಸಿ, ಅಭಿವೃದ್ಧಿ ಮಾಡಲಾಗುತ್ತದೆ ಎಂದರು. ತಾಪಂ ಮಾಜಿ ಸದಸ್ಯ ಮಾರ್ಕಂಡೇಗೌಡ, ಎಂ.ರಾಮಪ್ಪ, ಕೋಲಾರ ನಗರ ಸಭೆ ಮಾಜಿ ಸದಸ್ಯ ತ್ಯಾಗರಾಜ್‌, ಟಿಎಪಿಸಿಎಂಎಸ್‌ ನಿರ್ದೇಶಕ ಸತೀಶ್‌ಕುಮಾರ್‌, ಮುಖಂಡರಾದ ಚನ್ನವೀರಯ್ಯ, ರಾಮಸ್ವಾಮಿ, ರಘು, ಮಂಜುನಾಥ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next