Advertisement

ಮುಂಬೈ ಇಂಡಿಯನ್ಸ್ ಗೆ ಹೊಸ ಕೋಚ್?: ದ.ಆಫ್ರಿಕಾ ದಿಗ್ಗಜನ ಮೇಲೆ ಕಣ್ಣಿಟ್ಟ ಫ್ರಾಂಚೈಸಿ

05:48 PM Sep 15, 2022 | Team Udayavani |

ಮುಂಬೈ: ಐಪಿಎಲ್ ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಇದೀಗ ಹೊಸ ಕೋಚ್ ಹುಡುಕಾಟದಲ್ಲಿದೆ. ತಂಡದ ಕೋಚ್ ಆಗಿದ್ದ ಮಹೇಲಾ ಜಯವರ್ಧನೆ ಅವರಿಗೆ ಜಾಗತಿಕ ಕ್ರಿಕೆಟ್ ಅಭಿವೃದ್ಧಿ ಮುಖ್ಯಸ್ಥ ಸ್ಥಾನಕ್ಕೆ ಬಡ್ತಿ ನೀಡಿದ ಪರಿಣಾಮ ಹೊಸ ಕೋಚ್ ಆಯ್ಕೆ ಮಾಡಬೇಕಾಗಿದೆ. ಸದ್ಯ ದಕ್ಷಿಣ ಆಫ್ರಿಕಾದ ಕೋಚ್ ಮಾರ್ಕ್ ಬೌಚರ್ ಅವರು ಈ ರೇಸ್ ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಮುಂದಿನ ಟಿ20 ವಿಶ್ವಕಪ್ ಬಳಿಕ ತಾನು ದಕ್ಷಿಣ ಆಫ್ರಿಕಾ ಕೋಚ್ ಸ್ಥಾನದಿಂದ ಕೆಳಕ್ಕಿಳಿಯುತ್ತಿರುವುದಾಗಿ ಬೌಚರ್ ಈಗಾಗಲೇ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಅವರನ್ನು ಸಂಪರ್ಕ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:Web Exclusive: ಶ್ರೀಲಂಕಾದ ಗೆಲುವು ಆಕಸ್ಮಿಕವಲ್ಲ.. ಅದೊಂದು ಹೋರಾಟ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಜಾಗತಿಕ ಮಟ್ಟದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಳ್ಳುತ್ತಿದೆ. ದಕ್ಷಿಣ ಆಫ್ರಿಕಾ ಲೀಗ್ ನಲ್ಲಿ ಕೇಪ್ ಟೌನ್ ತಂಡವನ್ನು ಖರೀದಿ ಮಾಡಿದೆ. ಕೇಪ್ ಟೌನ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸೈಮನ್ ಕ್ಯಾಟಿಚ್ ನೇಮಕವನ್ನು ಮುಂಬೈ ಇಂಡಿಯನ್ಸ್ ದೃಢಪಡಿಸಿದೆ. ಹಾಶೀಮ್ ಆಮ್ಲಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಬಿನ್ ಪೀಟರ್ಸನ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಫೀಲ್ಡಿಂಗ್ ಕೋಚ್ ಜೇಮ್ಸ್ ಪಾಮ್ಮೆಂಟ್ ಇರಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next