Advertisement

ನಾಳೆ ಶಿರ್ವದಲ್ಲಿ ಮರೀನಾ ಸಿಲ್ಕ್ಸ್ ಶುಭಾರಂಭ

01:21 PM Oct 02, 2021 | Team Udayavani |

ಶಿರ್ವ: ಶಿರ್ವ ಮಂಚಕಲ್‌ ಪೇಟೆಯ ಮುಖ್ಯ ರಸ್ತೆಯ ಬಳಿ ಶಿರ್ವದ ಮರೀನಾ ಸಮೂಹ ಸಂಸ್ಥೆಗಳ ನೂತನ ವಾಣಿಜ್ಯ ಸಂಕೀರ್ಣ ಅಂಬ್ರೋಸ್‌ ಆರ್ಕೇಡ್‌ ಮತ್ತು ನೂತನ ಬಟ್ಟೆ ಮಳಿಗೆ ಮರೀನಾ ಸಿಲ್ಕ್ಸ್ ಸಂಸ್ಥೆಯು ರವಿವಾರ ಶುಭಾರಂಭಗೊಳ್ಳಲಿದೆ.

Advertisement

ಮುದರಂಗಡಿ ಸಂತ ಫ್ರಾನ್ಸಿಸ್‌ ಕ್ಷೇವಿಯರ್‌ ಚರ್ಚ್‌ನ ಧರ್ಮಗುರು ಫಾ| ಫ್ರಾನ್ಸಿಸ್‌ ಕ್ಸೇವಿಯರ್‌ ಲೂವಿಸ್‌ ವಾಜ್ಯ ಸಂಕೀರ್ಣವನ್ನು ಉದ್ಘಾಟಿಸಲಿರುವರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಫಾ| ಡೆನ್ನಿಸ್‌ ಡೇಸಾ ಪ್ರಾರ್ಥನಾ ವಿಧಿ ನೆರವೇರಿಸಲಿರುವರು. ಮಪಾಲ ಕ್ರೈಸ್ಟ್‌ ಕಿಂಗ್‌ ಚರ್ಚ್‌ನ ಧರ್ಮಗುರು ಫಾ| ಫೆಡ್ರಿಕ್‌ ಡಿ’ಸೋಜಾ ಮರಿನಾ ಸಿಲ್ಕ್ಸ್ ಬಟ್ಟೆ ಮಳಿಗೆಯನ್ನು ಉದ್ಘಾಟಿಸಲಿದ್ದು,ಪೆರ್ನಾಲ್‌ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಫಾ| ಜೆರೋಮ್‌ ಮೊಂತೆರಿಯೋ ಪ್ರಾರ್ಥನಾ ವಿಧಿ ನೆರವೇರಿಸಲಿರುವರು. ದ.ಕ.ಜಿಲ್ಲಾ ಪರಿಷತ್‌ನ ಮಾಜಿ ಉಪಾಧ್ಯಕ್ಷೆ ಲೀನಾ ಮತಾಯಸ್‌ ದೀಪ ಬೆಳಗಿಸಲಿರುವರು.

ಮುಖ್ಯ ಅತಿಥಿಗಳಾಗಿ ಉಡುಪಿಯ ನ್ಯಾಯವಾದಿ ವಿಲ್ಸನ್‌ ರೊಡ್ರಿಗಸ್‌,ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಮತ್ತು ಉದ್ಯಮಿ ಶಿರ್ವದ ಹೊಟೇಲ್‌ ಮಂದಾರದ ಮಾಲಕ ಕೆ. ಮನೋಹರ ಶೆಟ್ಟಿ ಭಾಗವಹಿಸಲಿ ರುವರು.

 ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ:

ಶಿರ್ವ ಪರಿಸರದಲ್ಲಿ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಸೇವೆ ನೀಡುತ್ತಿರುವ ಸಂಸ್ಥೆಯು ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ವಿಶಾಲ ಮಳಿಗೆಯಲ್ಲಿ ಮಕ್ಕಳ, ಪುರುಷರ, ಮಹಿಳೆಯರ ಎಲ್ಲಾ ತರದ ರೆಡಿಮೇಡ್‌ ಬಟ್ಟೆಗಳು,ಹ್ಯಾಂಡ್ಲೂಮ್‌,ಮದುವೆ ಸೀರೆ, ಸೂಟಿಂಗ್ಸ್‌, ಶರ್ಟಿಂಗ್ಸ್‌ ಮತ್ತು ಟೆಕ್ಸ್‌ಟೈಲ್ಸ್‌ ವಿಭಾಗವನ್ನು ಪ್ರಾರಂಭಿಸಿದ್ದು, ಮಿತದರದಲ್ಲಿ ಅತ್ಯುತ್ತಮ ಸೇವೆ ನೀಡಲಿದೆ

Advertisement

ಮರೀನಾ ಸಮೂಹ ಸಂಸ್ಥೆಗಳು:

ಮರೀನಾ ಸಂಸ್ಥೆಯನ್ನು ದಿ|ಅಂಬ್ರೋಸ್‌ ಮತಾಯಸ್‌ ಮತ್ತು ದಿ| ಸಿಲೆಸ್ತಿನ್‌ ಮತಾಯಸ್‌ ದಂಪತಿ 1972ರಲ್ಲಿ ಪ್ರಾರಂಭಿಸಿದ್ದು , ಉಡುಪಿ,ಶಿರ್ವ ಮತ್ತು ಬೆಳ್ಳೆ ಪರಿಸರದಲ್ಲಿ ವಿವಿಧ ಕ್ಷೇತ್ರಗಳಲ್ಲಿ 49 ವರ್ಷಗಳಿಂದ ಗುಣಮಟ್ಟದ ಸೇವೆ ನೀಡುತ್ತಿದೆ. ಮರೀನಾ ಡ್ರೆಸ್‌ ಸೆಂಟರ್‌,ಡಿಪಾರ್ಟ್‌ಮೆಂಟಲ್‌ ಸ್ಟೋರ್‌,ಫರ್ನಿಚರ್‌, ಸಾಫ್ಟ್‌ ಡ್ರಿಂಕ್ಸ್‌,ಫ್ಯಾನ್ಸಿ ಸ್ಟೋರ್‌ ಮೊದಲಾದ ಸಂಸ್ಥೆಗಳೊಂದಿಗೆ ಅಂಬ್ರೋಸ್‌ ಗ್ರೀನ್‌ ಫಾರ್ಮ್ ನಡೆಸುವ ಮೂಲಕ ಕೃಷಿ ಕ್ಷೇತ್ರದಲ್ಲಿಯೂ ಸೇವೆ ನೀಡುತ್ತಿದೆ.

ಶೇ. 10 ರಿಯಾಯಿತಿ:

ಗ್ರಾಹಕರಿಗಾಗಿ ವಿವಿಧ ವಿಭಾಗಗಳಲ್ಲಿ ಬಟ್ಟೆಗಳ ಬೃಹತ್‌ ಸಂಗ್ರಹವಿದ್ದು, ಮಹಿಳೆಯರು ,ಪುರುಷರು ಮತ್ತು ಮಕ್ಕಳಿಗಾಗಿ ಎಲ್ಲಾ ಸಮಾರಂಭಗಳಿಗೆ ಬೇಕಾಗುವ ಸಾಂಪ್ರದಾಯಿಕ ಮತ್ತು ನೂತನ ಶೈಲಿಯ ಉಡುಪುಗಳು ದೊರೆಯುತ್ತವೆ. ಸಂಸ್ಥೆಯ ಪ್ರಾರಂಭೋತ್ಸವದ ಸಲುವಾಗಿ ಉಡುಪುಗಳ ಖರೀದಿಯ ಮೇಲೆ ಶೇ. 10 ರ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರ ಖರೀದಿಗೆ ಅನುಭವಿ ಸಿಬಂದಿಗಳಿಂದ ಉತ್ತಮ ಸೇವೆ ನೀಡಲಾಗುತ್ತಿದ್ದು, ಮುಂಬರುವ ಹಬ್ಬಗಳಿಗಾಗಿ ಬಟ್ಟೆ ಕೊಳ್ಳಲು ಮರಿನಾ ಸಿಲ್ಕ್ಗೆ ಭೇಟಿ ನೀಡಿ ವಿಶೇಷ ಆಫರ್ಗಳನ್ನು ತಮ್ಮದಾಗಿಸಿ ಕೊಂಡು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿ ಎಂದು ಸಂಸ್ಥೆಯ ಪ್ರವರ್ತರಾದ ಫ್ರೆಡ್ರಿಕ್‌ ಮತಾಯಸ್‌ ಮತ್ತು ಜೆನಿವೀವ್‌ ಮತಾಯಸ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next