Advertisement

ಗಾಂಜಾ ಎಣ್ಣೆ ಪ್ರಕರಣ ಭೇದಿಸಿದ ವಿಟ್ಲ ಪೊಲೀಸ್‌ : ಓರ್ವನ ಬಂಧನ

10:20 AM Oct 05, 2020 | sudhir |

ವಿಟ್ಲ : ವಿಟ್ಲ ಸಮೀಪದ ಉಕ್ಕುಡ ಕಾಂತಡ್ಕದಲ್ಲಿ ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುಮಾರು 80 ಸಾವಿರ ರೂ. ಮೌಲ್ಯದ ವಸ್ತು ಸಹಿತ ಪೊಲೀಸರು ವಶಕ್ಕೆ ಪಡೆದ ಘಟನೆ ಸಂಭವಿಸಿದೆ. ಇದು ಜಿಲ್ಲೆಯ ಪ್ರಥಮ ಅಕ್ರಮ ಗಾಂಜಾ ಎಣ್ಣೆ ಪ್ರಕರಣವೆನ್ನಲಾಗಿದೆ.

Advertisement

ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್‌ ಖಾದರ್‌ ಯಾನೆ ಅದ್ದು (25) ಬಂ ಧಿತ ಆರೋಪಿ. ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ದಳ ಹಾಗೂ ವಿಟ್ಲ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಈತ ಅನುಮಾನಾಸ್ಪದವಾಗಿ ವರ್ತಿಸಿದ್ದರಿಂದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗಾಂಜಾ ಎಣ್ಣೆ (ಹ್ಯಾಶಿಶ್‌ ಆಯಿಲ್‌) ತಯಾರಿಸಿ ಮಾರಾಟ ಮಾಡುವ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ :14.94 ಲಕ್ಷ ರೂ. ಮೌಲ್ಯದ ಸಿಂಥೆಟಿಕ್‌ ಡ್ರಗ್‌ ವಶ : ಮಣಿಪಾಲದ ವಿದ್ಯಾರ್ಥಿ ಬಂಧನ

ಆತನಿಂದ ಸುಮಾರು 300 ಗ್ರಾಂ ಗಾಂಜಾ ಎಣ್ಣೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ 40 ಗ್ರಾಂ ಮೊಗ್ಗು – ಕಾಯಿ ಮಿಶ್ರಿತ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶ ರಾಜ್ಯದ ವಿಶಾಖ ಪಟ್ಟಣದ ಗಾಂಜಾ ಪೆಡ್ಲರ್‌ ಗಳ ಜತೆಗೆ ಬಂಧಿತನಿಗೆ ನಿರಂತರ ಸಂಪರ್ಕ ಇರುವ ಬಗ್ಗೆ ಮಾಹಿತಿಗಳಿದ್ದು, ಪೊಲೀಸರು ಈ
ನಿಟ್ಟಿನಲ್ಲಿ ತನಿಖೆ ನಡೆಸುತ್ತಿ ದ್ದಾರೆ. ಆರೋಪಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಗಾಂಜಾ ಹಾಗೂ ಗಾಂಜಾ ಎಣ್ಣೆ ಮಾರಾಟ ಜಾಲ ಹೊಂದಿದ್ದ ಎನ್ನಲಾಗಿದೆ. ಆದರೆ ಅಲ್ಲಿ  ತಪ್ಪಿಸಿಕೊಂಡಿದ್ದು, ದ.ಕ. ಜಿಲ್ಲೆಗೆ ತನ್ನ ಜಾಲ ವಿಸ್ತರಿಸುವ ಪ್ರಯತ್ನದಲ್ಲಿದ್ದಾಗಲೇ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ :ಮುನ್ನೆಚ್ಚರಿಕೆಯೊಂದಿಗೆ ಮಂಗಳೂರು ದಸರಾ : ಈ ಬಾರಿ ದಸರಾ ಮೆರವಣಿಗೆ ಇಲ್ಲ

Advertisement

ಎಸ್‌ಪಿ ಡಾ| ಲಕ್ಷ್ಮೀಪ್ರಸಾದ್‌ ಮಾರ್ಗ ದರ್ಶನದಲ್ಲಿ ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟೈನ್‌ ಡಿ’ಸೋಜಾ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ಅವರನ್ನೊಳಗೊಂಡ ವಿಟ್ಲ ಠಾಣಾಧಿಕಾರಿ ವಿನೋದ್‌ ಎಸ್‌.ಕೆ., ಬಂಟ್ವಾಳ ಸಂಚಾರ ಠಾಣಾಧಿಕಾರಿ ರಾಜೇಶ್‌ ಕೆ.ವಿ., ವಿಟ್ಲ ಪ್ರೊಬೆಷನರಿ ಉಪ ನಿರೀಕ್ಷಕ ಕೃಷ್ಣಕಾಂತ್‌, ಗೋಣಿಬಸಪ್ಪ, ಕುಮಾರ್‌, ವಿವೇಕ್‌, ವಿಟ್ಲ ಪೊಲೀಸರಾದ ಕೆ.ಟಿ. ಜಯರಾಮ, ಪ್ರಸನ್ನ, ಲೋಕೇಶ್‌, ಪ್ರತಾಪ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next