Advertisement

‘ಮರ್ದಿನಿ’ ಆ್ಯಕ್ಷನ್‌ ಅಬ್ಬರ

11:38 AM Sep 16, 2022 | Team Udayavani |

ಬಹು ಸಮಯದ ನಂತರ ಕನ್ನಡದ ಮತ್ತೂಂದು ನಾಯಕಿ ಪ್ರಧಾನ ಆ್ಯಕ್ಷನ್‌ ಸಿನಿಮಾ “ಮರ್ದಿನಿ’ ಈ ವಾರ 100ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಮರ್ದಿನಿ’ ಸಿನಿಮಾದ ಟ್ರೇಲರ್‌ ಆ್ಯಕ್ಷನ್‌ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಮರ್ದಿನಿ’ ಅಬ್ಬರ ಥಿಯೇಟರ್‌ನಲ್ಲಿ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ. “ಅಂಕಿತ್‌ ಫಿಲಂಸ್‌’ ಬ್ಯಾನರ್‌ನಡಿ ಶ್ರೀಮತಿ ಭಾರತಿ ಜಗ್ಗಿ ಮತ್ತು ಜಗದೀಶ್‌ ಜಗ್ಗಿ ನಿರ್ಮಿಸಿರುವ “ಮರ್ದಿನಿ’ ಸಿನಿಮಾಕ್ಕೆ ಕಿರಣ್‌ ಕುಮಾರ್‌ ವಿ. ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

Advertisement

ರಿತನ್ಯಾ ಹೂವಣ್ಣ ನಾಯಕಿಯಾಗಿ ಕಾಣಿಸಿಕೊಂಡಿರುವ “ಮರ್ದಿನಿ’ ಸಿನಿಮಾದಲ್ಲಿ ಅಕ್ಷಯ್‌, ಸುಶ್ಮಿತಾ, ಮನಮೋಹನ್‌ ರೈ, ಗವಿಸಿದ್ದಯ್ಯ, ಅಶೋಕ್‌, ತೃಪ್ತಿ, ಇಂಚರ ಮೊದಲಾದವರು ಇತರ ಪ್ರಮುಖ ತಾರಾಗಣದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹಿತನ್‌ ಹಾಸನ್‌ ಸಂಗೀತ ಸಂಯೋಜಸಿದ್ದು, ಚಿತ್ರಕ್ಕೆ ಅಕ್ಷಯ್‌ ಮತ್ತು ಗಜೇಂದ್ರ ಕಥೆ, ಚಿತ್ರಕಥೆ ಹಾಗು ಸಂಭಾಷಣೆ ಬರೆದಿದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಸೈಬೀರಿಯನ್‌ ಹಸ್ಕಿ ತಳಿಯ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದೆ.

“ಮರ್ದಿನಿ’ ಬಿಡುಗಡೆ ಬಗ್ಗೆ ಮಾತನಾಡುವ ನಿರ್ಮಾಪಕ ಜಗದೀಶ್‌ ಜಗ್ಗಿ, “ನಮ್ಮ ಸಿನಿಮಾದ ಟೈಟಲ್ಲೇ ಹೇಳುವಂತೆ, “ಮರ್ದಿನಿ’ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾ. ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂಥವರಿಗೆ ಒಂದಷ್ಟು ಅವಕಾಶ ನೀಡಬೇಕು ಎಂಬ ಉದ್ದೇಶದಿಂದ, ಬಹುತೇಕ ಹೊಸಬರನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಆ್ಯಕ್ಷನ್‌ ಎಂಟರ್‌ಟೈನ್ಮೆಂಟ್‌ ಜೊತೆಗೊಂದು ಮೆಸೇಜ್‌ ಈ ಸಿನಿಮಾದಲ್ಲಿದೆ. ಸುದೀಪ್‌ ಅವರಂಥ ಸ್ಟಾರ್ ಕೂಡ ಸಿನಿಮಾನ್ನು ಮೆಚ್ಚಿ, ಹೊಸಬರಿಗೆ ಬೆನ್ನುತಟ್ಟಿದ್ದಾರೆ. ಆಡಿಯನ್ಸ್‌ ಕೂಡ ಅದೇ ರ ತಿ ಸಿನಿಮಾ ಮೆಚ್ಚಿಕೊಳ್ಳುತ್ತಾರೆ’ ಎಂಬ ಭರವಸೆಯ ವ್ಯಕ್ತಪಡಿಸುತ್ತಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next