ಕೊಚ್ಚಿ: 2024 ಮಾಲಿವುಡ್‌ಗೆ ಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದರೆ ತಪ್ಪಾಗದು. ಸತತ ಹಿಟ್ ಚಿತ್ರಗಳು ಮಾಲಿವುಡ್‌ನಲ್ಲಿ ರಾರಾಜಿಸುವುದರ ಜತೆಗೆ ಬಾಕ್ಸಾಫೀಸ್‌ನಲ್ಲೂ ಸಖತ್ ಕಲೆಕ್ಷನ್ ಮಾಡಿಕೊಟ್ಟಿತು.
2024ರ ವರ್ಷಾಂತ್ಯದಲ್ಲಿ ಬಂದ ʼಮಾರ್ಕೊʼ (Marco) ಮಾಲಿವುಡ್‌ನ ಮೊದಲ ಕಂಪ್ಲೀಟ್ ಆ್ಯಕ್ಷನ್ ಪ್ಯಾಕೇಜ್ ಸಿನಿಮಾವಾಗಿದೆ. ಸಂಪೂರ್ಣ ರಕ್ತಸಿಕ್ತವಾದ ಕಥೆಯನ್ನೊಳಗೊಂಡ ಈ ಸಿನಿಮಾ ಮಾಸ್ ಪ್ರಿಯರ ಮನಸ್ಸು ಗೆದ್ದಿದೆ.
ಉನ್ನಿ ಮುಕುಂದನ್ (Unni Mukundan) ಪ್ರಧಾನ ಪಾತ್ರದಲ್ಲಿರುವ ʼಮಾರ್ಕೋʼ ರಿಲೀಸ್ ಆದ ದಿನದಿಂದ ಇವತ್ತಿನವರೆಗೂ ಸದ್ದು ಮಾಡುತ್ತಿದೆ. ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಇದನ್ನು ಹಿಂದಿಯ ʼಅನಿಮಲ್ʼ ಚಿತ್ರಕ್ಕೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ.
ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದ್ದು, ಇದುವರೆಗೆ ಬಾಕ್ಸಾಫೀಸ್‌ನಲ್ಲಿ 42 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಚಿತ್ರ ಮಾಡಿದೆ. ಯಶಸ್ವಿಯಾಗಿ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಚಿತ್ರದ ಹೆಚ್ ಡಿ ಪ್ರತಿ ಆನ್ಲೈನ್‌ನಲ್ಲಿ ಸೋರಿಕೆಯಾಗಿದೆ.
ʼಮಾರ್ಕೊʼಗೆ ಪೈರಸಿ ಕಾಟ ಶುರುವಾಗಿದೆ. 1TamilMV, TamilBlasters ಸೇರಿದಂತೆ ಹಲವು ಟೊರೆಂಟ್ ವೆಬ್‌ಸೈಟ್‌ಗಳಲ್ಲಿ ಚಿತ್ರ ಸೋರಿಕೆಯಾಗಿದೆ. ಈ ಪೈರಸಿ ಸೈಟ್‌ಗಳಿಂದ ಚಲನಚಿತ್ರವನ್ನು ಸ್ಟ್ರೀಮ್ ಮಾಡಬಹುದು ಅಥವಾ ಡೌನ್‌ಲೋಡ್ ಮಾಡಬಹುದು. ʼಮಾರ್ಕೊʼ ಚಿತ್ರದ ಮಲಯಾಳಂ ಆವೃತ್ತಿಯ ಥಿಯೇಟ್ರಿಕಲ್ ಪ್ರಿಂಟ್ ಕೂಡ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಇವಿಷ್ಟು ಸಿನಿಮಾಗಳು ಮಾತ್ರವಲ್ಲದೆ ಕನ್ನಡದ ʼಯುಐʼ, ತಮಿಳಿನ ʼವಿಧುತಲೈ -2ʼ ಚಿತ್ರಗಳಿಗೂ ಪೈರಸಿ ಕಾಟ ಕಾಡಿದೆ ಎಂದು ವರದಿಯಾಗಿದೆ.
ಈ ಹಿಂದೆ ಕೊಚ್ಚಿಯ ಸೈಬರ್ ಸೆಲ್ ʼಮಾರ್ಕೊʼ ಪೈರೇಟೆಡ್ ಆವೃತ್ತಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದಕ್ಕಾಗಿ ಒಬ್ಬನನ್ನು ಬಂಧಿಸಿದ್ದರು. ಆರೋಪಿಯನ್ನು ಬಿಟೆಕ್ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.