Advertisement

ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಕುತ್ತಾರು ದೆಕ್ಕಾಡಿನಲ್ಲಿ ಸಂಪನ್ನ

11:54 AM Mar 18, 2024 | Team Udayavani |

ಉಳ್ಳಾಲ: ಸಮಸ್ತ ಹಿಂದೂ ಸಮಾಜದ ಏಕತೆ ಮತ್ತು ಲೋಕ ಕಲ್ಯಾಣಕ್ಕಾಗಿ ವಿಹಿಂಪ ಮಂಗಳೂರು ಆಶ್ರಯದಲ್ಲಿ ಕದ್ರಿ ಶ್ರೀ ಕ್ಷೇತ್ರದಿಂದ ಕುತ್ತಾರು ದೆಕ್ಕಾಡಿನ ಶ್ರೀ ಕೊರಗಜ್ಜನ ಆದಿಕ್ಷೇತ್ರದ ವರೆಗೆ ನಾಲ್ಕನೇ ವರುಷದ ಪಾದಯಾತ್ರೆ “ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ರವಿವಾರ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Advertisement

ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಮಾತನಾಡಿ, ಪಾದಯಾತ್ರೆಯ ಮೂಲಕವೇ ಸನಾತನ ಧರ್ಮವನ್ನು ಸಂಘಟಿಸಲು ಸಾಧ್ಯವಿದ್ದು, ಜಿಲ್ಲೆಯ ವಿವಿಧೆಡೆ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದಾಗ ಹಿಂದೂ ಸಮಾಜವು ಒಗ್ಗಟ್ಟಾಗಿ ಅಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಸಾತ್ವಿಕ ಹೋರಾಟ ನಡೆಸಿ ಯಶಸ್ವಿಯಾಗಿತ್ತು ಎಂದರು.

ವಿಹಿಂಪ ಮಾಜಿ ಅಧ್ಯಕ್ಷ ಜಗದೀಶ ಶೇಣವ ಮಾತನಾಡಿ, ಹಿಂದೂ ಸಮಾಜದ ಏಕತೆಗಾಗಿ ವಿಹಿಂಪ ಈ ಪಾದಯಾತ್ರೆ ನಡೆಸುತ್ತಿದ್ದು, 10ರಿಂದ 12 ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಶ್ರೀ ಪಂಜದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್‌ ಸಹಕಾರ ಅಪಾರ ಎಂದರು.

ಗಣ್ಯರಾದ ವಿವೇಕ್‌ ಶೆಟ್ಟಿ ಬೊಲ್ಯಗುತ್ತು, ಜಯರಾಮ ಶೆಟ್ಟಿ ಕುತ್ತಾರುಗುತ್ತು, ಬಾಲಕೃಷ್ಣ ಸಾಲಿಯಾನ್‌ ಕಂಪ, ಮಾಯಿಲ, ಶಿವಾನಂದ ಮೆಂಡನ್‌, ಎಚ್‌.ಕೆ. ಪುರುಷೋತ್ತಮ, ಗೋಪಾಲ ಕುತ್ತಾರು, ಪ್ರವೀಣ್‌ ಕುತ್ತಾರು, ರವಿ ಅಸೈಗೋಳಿ, ನಾರಾಯಣ ಕುಂಪಲ, ಜಗದೀಶ್‌ ಆಳ್ವ ಕುವೆತ್ತಬೈಲು, ಜಯರಾಮ ಭಂಡಾರಿ ಮಾಗಣತ್ತಡಿ, ಮಹಾಬಲ ಹೆಗ್ಡೆ ಮಾಗಣತ್ತಡಿ, ದೇವಿಪ್ರಸಾದ್‌ ಶೆಟ್ಟಿ, ಜೈಕಿಶನ್‌ ರೈ, ಶ್ರೀರಾಮ ರೈ, ಪ್ರೀತಮ್‌ ಶೆಟ್ಟಿ, ರಂಜಿತ್‌ ಸುಲಾಯ, ವಿದ್ಯಾಚರಣ್‌ ಭಂಡಾರಿ, ಪ್ರಬಂಧಕ ಬಾಲಕೃಷ್ಣ ರೈ, ಮನೋಜ್‌ ಹೆಗ್ಡೆ, ಯತೀಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಮಾಗಣತ್ತಡಿ, ಕುತ್ತಾರುಗುತ್ತು ರತ್ನಾಕರ ಕಾವ, ದೀಪಕ್‌ ಶೆಟ್ಟಿ ಕುತ್ತಾರುಗುತ್ತು, ಬೊಲ್ಯ ಗುತ್ತು ವಿನೋದ್‌ ಶೆಟ್ಟಿ, ಪದ್ಮನಾಭ ಶೆಟ್ಟಿ ಗೇಣಿ ಮನೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next