Advertisement

ಮಾ. 4-26: ವನಿತಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌?

11:39 PM Feb 03, 2023 | Team Udayavani |

ಹೊಸದಿಲ್ಲಿ: ವನಿತಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಪಂದ್ಯಾವಳಿಗೆ (ಡಬ್ಲ್ಯುಪಿಎಲ್‌) ಭರ್ಜರಿ ಆರಂಭ ನೀಡಲು ಬಿಸಿಸಿಐ ತಯಾರಿ ನಡೆಸುತ್ತಿದೆ.

Advertisement

ಈಗಾಗಲೇ ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಆಟಗಾರರ ಹರಾಜು ಇನ್ನಷ್ಟೇ ನಡೆಯಬೇಕಿದೆ. ಇದಕ್ಕೂ ಮುನ್ನ ಚೊಚ್ಚಲ ಡಬ್ಲ್ಯುಪಿಎಲ್‌ನ ತಾತ್ಕಾಲಿಕ ವೇಳಾಪಟ್ಟಿಯೊಂದು ಹರಿದಾಡ ಲಾರಂಭಿಸಿದೆ. ಇದರಂತೆ ಮಾರ್ಚ್‌ 4ರಿಂದ 26ರ ತನಕ ಈ ಪಂದ್ಯಾವಳಿ ನಡೆಯಲಿದೆ.

ಚೊಚ್ಚಲ ಡಬ್ಲ್ಯುಪಿಎಲ್‌ ಪಂದ್ಯಾವಳಿ ಯನ್ನು ಮುಂಬಯಿಯ ಎರಡು ತಾಣಗಳಲ್ಲಿ ಆಯೋಜಿಸುವುದು ಬಿಸಿಸಿಐ ಯೋಜನೆ ಎನ್ನಲಾಗಿದೆ. ಇದರಂತೆ ಡಿ.ವೈ. ಪಾಟೀಲ್‌ ಸ್ಟೇಡಿ ಯಂನಲ್ಲಿ ಕೂಟದ ಆರಂಭಿಕ ಪಂದ್ಯ ನಡೆಯುವ ಸಾಧ್ಯತೆ ಇದ್ದು, ಮುಂಬಯಿ ಮತ್ತು ಅಹ್ಮದಾಬಾದ್‌ ತಂಡಗಳು ಉದ್ಘಾಟನ ಪಂದ್ಯದಲ್ಲಿ ಎದುರಾಗಲಿವೆ.

ಮುಂಬಯಿಯ ಇನ್ನೊಂದು ತಾಣ “ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ’ ಸ್ಟೇಡಿಯಂ (ಸಿಸಿಐ). ಮುಂಬಯಿ-ಅಹ್ಮದಾಬಾದ್‌ ತಂಡಗಳ ಎರಡನೇ ಸುತ್ತಿನ ಪಂದ್ಯ ಮಾ. 14ರಂದು ನಡೆಯಲಿದೆ.

ಕೂಟದ ದ್ವಿತೀಯ ಪಂದ್ಯ ಮಾ. 5ರಂದು ಬೆಂಗಳೂರು-ಡೆಲ್ಲಿ ನಡುವೆ ಸಿಸಿಐನಲ್ಲಿ, ಅಂದೇ ರಾತ್ರಿ ಲಕ್ನೋ- ಅಹ್ಮದಾಬಾದ್‌ ಡಿ.ವೈ. ಪಾಟೀಲ್‌ ಸ್ಟೇಡಿಯಂ ಸೆಣಸಲಿವೆ.

Advertisement

ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ- ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯ ವೊಂದು ಮಾ. 17ರಂದು ನಡೆಯುವ ಕಾರಣ ಇದನ್ನು ವನಿತಾ ಪ್ರೀಮಿಯರ್‌ ಲೀಗ್‌ಗೆ ಪರಿಗಣಿಸಲಾಗಿಲ್ಲ. ಅಲ್ಲದೇ ಇಲ್ಲಿ ಐಪಿಎಲ್‌ ಪಂದ್ಯಗಳು ನಡೆಯು ವುದೂ ಇನ್ನೊಂದು ಕಾರಣ.

ಕೂಟದ ಮಾದರಿ
5 ತಂಡಗಳ ನಡುವೆ ಒಟ್ಟು 22 ಪಂದ್ಯಗಳು ನಡೆಯಲಿವೆ. 3 ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇಲ್ಲಿ ಗೆದ್ದ ತಂಡಕ್ಕೆ ಫೈನಲ್‌ ಟಿಕೆಟ್‌ ಸಿಗಲಿದೆ.

ಎಲಿಮಿನೇಟರ್‌ ಪಂದ್ಯ ಮಾ. 24ರಂದು ಸಿಸಿಐನಲ್ಲಿ, ಫೈನಲ್‌ ಮಾ. 26ರಂದು ಡಿ.ವೈ. ಪಾಟೀಲ್‌ ಸ್ಟೇಡಿ ಯಂನಲ್ಲಿ ನಡೆಯಲಿದೆ. ಪಂದ್ಯಾವಳಿಗೆ ಒಟ್ಟು 5 ವಿರಾಮ ದಿನಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next