Advertisement
ಈಗಾಗಲೇ ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಆಟಗಾರರ ಹರಾಜು ಇನ್ನಷ್ಟೇ ನಡೆಯಬೇಕಿದೆ. ಇದಕ್ಕೂ ಮುನ್ನ ಚೊಚ್ಚಲ ಡಬ್ಲ್ಯುಪಿಎಲ್‌ನ ತಾತ್ಕಾಲಿಕ ವೇಳಾಪಟ್ಟಿಯೊಂದು ಹರಿದಾಡ ಲಾರಂಭಿಸಿದೆ. ಇದರಂತೆ ಮಾರ್ಚ್ 4ರಿಂದ 26ರ ತನಕ ಈ ಪಂದ್ಯಾವಳಿ ನಡೆಯಲಿದೆ.
Related Articles
Advertisement
ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ- ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯ ವೊಂದು ಮಾ. 17ರಂದು ನಡೆಯುವ ಕಾರಣ ಇದನ್ನು ವನಿತಾ ಪ್ರೀಮಿಯರ್ ಲೀಗ್‌ಗೆ ಪರಿಗಣಿಸಲಾಗಿಲ್ಲ. ಅಲ್ಲದೇ ಇಲ್ಲಿ ಐಪಿಎಲ್ ಪಂದ್ಯಗಳು ನಡೆಯು ವುದೂ ಇನ್ನೊಂದು ಕಾರಣ.
ಕೂಟದ ಮಾದರಿ5 ತಂಡಗಳ ನಡುವೆ ಒಟ್ಟು 22 ಪಂದ್ಯಗಳು ನಡೆಯಲಿವೆ. 3 ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇಲ್ಲಿ ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಸಿಗಲಿದೆ. ಎಲಿಮಿನೇಟರ್ ಪಂದ್ಯ ಮಾ. 24ರಂದು ಸಿಸಿಐನಲ್ಲಿ, ಫೈನಲ್ ಮಾ. 26ರಂದು ಡಿ.ವೈ. ಪಾಟೀಲ್ ಸ್ಟೇಡಿ ಯಂನಲ್ಲಿ ನಡೆಯಲಿದೆ. ಪಂದ್ಯಾವಳಿಗೆ ಒಟ್ಟು 5 ವಿರಾಮ ದಿನಗಳಿವೆ.