ಮರವಂತೆ: ಒಂದೆಡೆ ಭೋರ್ಗರೆಯುವ ಸಮುದ್ರ ಇನ್ನೊಂದೆಡೆ ಪಶ್ಚಿಮ ಘಟ್ಟದಿಂದ ಪ್ರಶಾಂತವಾಗಿ ಹರಿಯುವ ನದಿ, ಸುತ್ತಮುತ್ತಲು ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ನಡುವೆ ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಸ್ಥಾನ ಕೇಂದ್ರಿತವಾಗಿ ಜು.23ರಂದು ಕರ್ಕಾಟಕ ಅಮಾವಾಸ್ಯೆಯಂದು ನಡೆಯುವ ಬೃಹತ್ ಜಾತ್ರೆಗೆ ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ಕರಾವಳಿ ಜನರ ಆರಾಧ್ಯ ದೇವರು, ನಂಬಿದ ಭಕ್ತರ ವರ ನೀಡುವ ವರಹ ಸ್ವಾಮಿ ದೇಗುಲಕ್ಕೆ ಜಾತ್ರೆಯ ದಿನದಂದು ಬೆಳಗ್ಗಿನ ಜಾವದಿಂದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬರಲು ಆರಂಭಿಸುತ್ತಾರೆ, ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ, ವರಾಹ ದೇವರಿಗೆ, ಗಂಗಾಧರೇಶ್ವರ ದೇವರಿಗೆ ಅಭಿಷàಕ, ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಾರೆ.
ಅಮಾವಾಸ್ಯೆಯ ಜಾತ್ರೆಗೆ ಬರುವವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳಾಗುತ್ತಿವೆ. ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗು ತ್ತಿದ್ದು, ಪೂಜಾ ಕೈಂಕರ್ಯಕ್ಕೆ ಅಗತ್ಯ ವಸ್ತುಗಳನ್ನು ಶೇಖರಿಸಲಾಗುತ್ತಿದೆ, ಜನರು ದೇವರ ದರುಶನ ಪಡೆಯಲು ಸರತಿ ಸಾಲಿನಲ್ಲಿ ಒಳ ಬರಲು ಹಾಗೂ ಹೊಗಲು ವ್ಯವ್ಯಸ್ಥಿತವಾದ ರೀತಿಯಲ್ಲಿ ಬೇಲಿಗಳನ್ನು ನಿರ್ಮಿಸಲಾಗುತ್ತಿದೆ.ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಟಾರ್ ನೇತೃತ್ವದಲ್ಲಿ ವ್ಯವಸ್ಥಿತವಾದ ಬರದ ಸಿದ್ಧತೆ ನಡೆಯುತ್ತಿದೆ. ಸಮಿತಿ ಸದಸ್ಯರು, ಅರ್ಚಕ ಉಪಾದಿವಂತರು, ಸಿಬಂದಿ, ಸ್ವಯಂ ಸೇವಕರು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಅವರಿಗೆ ಸಹಕಾರ ನೀಡುತ್ತಿದ್ದಾರೆ.ನದಿ ಕಡಲಿನ ನಡುವೆ ದೇವಸ್ಥಾನದ ಪಕ್ಕದಲ್ಲಿ ರಾ. ಹೆದ್ದಾರಿ ಇರುವುದರಿಂದ ವಾಹನ ಮತ್ತು ಜನ ದಟ್ಟಣೆ ಯನ್ನು ನಿಯಂತ್ರಿಸಲು, ಹಾಗೂ ನದಿ, ಸಮುದ್ರ ಬದಿ ಯಲ್ಲಿ ಅಪಾಯ ಸಂಭವಿಸುವುದನ್ನು ತಡೆಯಲು ದೊಡ್ಡ ಸಂಖ್ಯೆಯ ಪೊಲೀಸ್ ವ್ಯವಸ್ಥೆ ಜಾತ್ರೆಯುದ್ದಕ್ಕೂ ಕಾರ್ಯನಿರತವಾಗಿರುವುದು ಆವಶ್ಯಕ ವಾಗಿರುವುದರಿಂದ ಪೊಲೀಸ್ ಇಲಾಖೆ ಈ ಕುರಿತು ಮುಜಾಗೃತ ಕ್ರಮ ಕೈಗೊಳ್ಳುತ್ತಿವೆ.