Advertisement
ಸಮುದ್ರ ತೀರದ ರಸ್ತೆ, ತೆಂಗಿನ ಮರಗಳು ಸೇರಿದಂತೆ ಮನೆಗಳು ಅಪಾಯ ಎದುರಿಸುತ್ತಿವೆ. ಅಲೆಗಳ ಅಬ್ಬರಕ್ಕೆ ನೀರು ಮನೆಯ ಅಂಗಳಕ್ಕೆ ಬರುತ್ತಿದೆೆ.
ಬೇಸಗೆಯಲ್ಲಿ ಕಡಲ್ಕೊರೆತ ಉಂಟಾಗಿ ಅಪಾಯ ಎದುರಾಗಿತ್ತು. ಇದೀಗ ಮಳೆ ಬಿರುಸುಗೊಂಡಾಗಲೇ ಕಡಲಿನ ಆರ್ಭಟವೂ ಜೋರಾಗಿದೆ. ಇದಕ್ಕೆ ಕಾರಣ ನಿರ್ಮಾಣ ಹಂತದಲ್ಲಿರುವ ಹೊರ ಬಂದರಿನ ಅಪೂರ್ಣ ಕಾಮಗಾರಿಯೇ ಎನ್ನುತ್ತಾರೆ ಸ್ಥಳೀಯರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳು ವಂತೆ ಕ್ರಮ ಕೈಗೊಳ್ಳ ಬೇಕು. ಈಗ ನಿರ್ಮಿಸಿರುವ ತಡೆಗೋಡೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.