Advertisement

ಮ್ಯಾರಥಾನ್: ಓಟದಲ್ಲಿ ಹೆಜ್ಜೆ ಹಾಕಿದ ಸಂಸದ ಅಣ್ಣ ಸಾಹೇಬ್ ಜೊಲ್ಲೆ

01:26 PM Dec 05, 2021 | Team Udayavani |

ಚಿಕ್ಕೋಡಿ: ಕ್ರೀಡೆಯಿಂದ ಸಾಮರಸ್ಯ ವಾತಾವರಣ ನಿರ್ಮಾಣ. ಯುವಕರು ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಕರೆ ನೀಡಿದರು.

Advertisement

ಗಡಿ ಭಾಗದ ನಿಪ್ಪಾಣಿ ನಗರದಲ್ಲಿ, ಎಂಡ್ಯೂರೆನ್ಸ್ ಸ್ಪೋರ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಮ್ಯಾರಥನ್ ಸ್ಪರ್ಧೆಗೆ ಚಾಲನೆ ನೀಡಿದ ಅವರು ಆಟೋಟಗಳಲ್ಲಿ ಭಾಗವಹಿಸುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬೆಳವಣಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮ್ಯಾರಥನ್ ಸ್ಪರ್ಧೆ ಆಯೋಜಿಸಿದ ಎಂಡ್ಯೂರೆನ್ಸ್ ಸ್ಪೋರ್ಟ್ ಅಸೋಸಿಯೇಷನ್ ನ ಸರ್ವರಿಗೂ ಕೃತಜ್ಞತೆಗಳು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಓಟದಲ್ಲಿ ಪಾಲ್ಗೊಂಡು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.

ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ.ಬಂಡಾ ಘೋರ್ಪಡೆ. ಶಾಹಿಲ್ ಶಹಾ ಮತ್ತು ನಿಪ್ಪಾಣಿ ಎಂಡ್ಯೂರೆನ್ಸ್ ಸ್ಪೋರ್ಟ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ನಗರಸಭೆ ಸದಸ್ಯರು ಹಾಗೂ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next