Advertisement

ನಾಳೆಯಿಂದ ಆನ್‌ಲೈನ್‌ಲ್ಲೇ ನಕ್ಷೆ

12:55 PM Apr 01, 2018 | |

ಬೆಂಗಳೂರು: ನಗರದ ಜನರಿಗೆ ಸುಲಭ ಹಾಗೂ ಶೀಘ್ರವಾಗಿ ಕಟ್ಟಡ ನಕ್ಷೆ ಮಂಜೂರು ಮಾಡಲು ಬಿಬಿಎಂಪಿ ಜಾರಿಗೊಳಿಸಿರುವ “ಆನ್‌ಲೈನ್‌ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ’ ಏಪ್ರಿಲ್‌ 2ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ.

Advertisement

ನಕ್ಷೆ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಪಾಲಿಕೆ ಈ ವ್ಯವಸ್ಥೆ ಜಾರಿಗೊಳಿಸಿದ್ದು, ಮಾ.19ರಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ್ದರು.

ಅದರಂತೆ ಇನ್ನು ಮುಂದೆ ನಾಗರಿಕರು ಮನೆಯಲ್ಲಿ ಕುಳಿತೇ ಕಟ್ಟಡ ನಕ್ಷೆ, ಆರಂಭಿಕ ಪ್ರಮಾಣಪತ್ರ (ಸಿಸಿ), ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯಬಹುದಾಗಿದೆ. ಅಧಿಕಾರಿಗಳಿಗೂ ಅರ್ಜಿಗಳ ವಿಲೇವಾರಿ ಮಾಡಲು ನಿಗದಿತ ಕಾಲಮಿತಿ ನೀಡಲಾಗಿದೆ. ಜತೆಗೆ ಹೆಚ್ಚುವರಿ ದಾಖಲೆಗಳನ್ನು ಸಹ ನಾಗರಿಕರು ಆನ್‌ಲೈನ್‌ ಮೂಲಕವೇ ಸಲ್ಲಿಸಬಹುದು. ಇದರಿಂದಾಗಿ ನಾಗರಿಕರಿಗೆ ನಕ್ಷೆ ಬೇಗ ದೊರೆಯಲಿದೆ. 

ಅರ್ಜಿ ಸಲ್ಲಿಸುವುದು ಹೇಗೆ?: ಬಿಬಿಎಂಪಿ ವೆಬ್‌ಸೈಟ್‌ www.bbmp.govi.in ಗೆ ಭೇಟಿ ನೀಡಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು. ಈ ವೇಳೆ ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ನಂತರ ಪ್ರಾರಂಭಿಕ ಪರಿಶೀಲನಾ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕು. ಇದಾದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿಯನ್ನು ಅಪ್‌ಲೋಡ್‌ ಮಾಡಲಿದ್ದು, ಕೂಡಲೇ ಅರ್ಜಿದಾರರಿಗೆ ನಕ್ಷೆ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next