Advertisement

ಭೇದಿಸಲಾಗದ ಹಲವು ಕಳವು, ದರೋಡೆ ಪ್ರಕರಣಗಳು; ನಗರದ ನಾಗರಿಕರಲ್ಲಿ ಹೆಚ್ಚುತ್ತಿರುವ ಆತಂಕ

11:33 PM Jun 22, 2024 | Team Udayavani |

ಮಂಗಳೂರು: ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಕೆಲವು ತಿಂಗಳು ಗಳಲ್ಲಿ ನಡೆದ ಕಳವು ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಇನ್ನಷ್ಟು ದರೋಡೆ ಯಂತಹ ಪ್ರಕರಣಗಳಿಗೆ ಪ್ರೇರಣೆ ಯಾಗುತ್ತಿದೆಯೇ ಎಂಬ ಆತಂಕ ನಾಗರಿ ಕರನ್ನು ಕಾಡುವಂತಾಗಿದೆ. ಶುಕ್ರವಾರ ರಾತ್ರಿ ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿಯೋರ್ವರ ಮನೆಯಲ್ಲಿ ದರೋಡೆ ನಡೆದಿದೆ.

Advertisement

ಹಲವು ಮನೆಗಳನ್ನು ಹೊಕ್ಕಿದ್ದರು!
ಘಟನೆ 1: ಮನೆಯವರು ಮೈಸೂರಿಗೆ ಮೇ 5ರಂದು ಪ್ರವಾಸಕ್ಕೆ ಹೋಗಿದ್ದರು. ಮೇ 7ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ 1.60 ಲ.ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.

ಘಟನೆ 2: ಮೇ 10ರಂದು ಅಪರಾಹ್ನ ಮನೆಯವರು ಯಕ್ಷಗಾನ ನೋಡ ಲೆಂದು ಹೊರಗೆ ಹೋಗಿ ದ್ದು, ಮರುದಿನ ಸಂಜೆ ಮನೆಗೆ ವಾಪಸಾಗಿದ್ದರು. ಆಗ ಮನೆಯಲ್ಲಿದ್ದ ಚಿನ್ನದ ಬಳೆ, ಲ್ಯಾಪ್‌ಟಾಪ್‌, ನಗದು ಕಳವಾಗಿತ್ತು.

ಘಟನೆ 3: ಮನೆಯವರು ಮೇ 17ರಂದು ಸಂಜೆ ಮನೆಯಿಂದ ಸಂಬಂಧಿಕರ ಮನೆಗೆ ಹೋಗಿದ್ದರು. ಮೇ 20ರಂದು ಮಧ್ಯಾಹ್ನ ಬಂದು ನೋಡಿದಾಗ ಮನೆಯಲ್ಲಿದ್ದ ಚಿನ್ನದ ಪೆಂಡೆಂಟ್‌, ಬ್ರಾಸ್ಲೆಟ್‌, ಬೆಳ್ಳಿಯ ಉಂಗುರ, ವಾಚ್‌ ಇತ್ಯಾದಿ ಕಳವಾಗಿದ್ದವು.

ಇತರ ಘಟನೆ
ಉರ್ವ ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಟ್ಟಾರದ ಪಿಜಿಯಲ್ಲಿದ್ದವರು ಮೇ 9ರಂದು ಸಂಜೆ ಹೊರಗೆ ಹೋಗಿ ರಾತ್ರಿ 7.20ಕ್ಕೆ ಬಂದು ನೋಡಿದಾಗ ಲ್ಯಾಪ್‌ಟಾಪ್‌, ಮೊಬೈಲ್‌ ಕಳವಾಗಿತ್ತು. ನಗರದ ಕಣ್ಣಿನ ಆಸ್ಪತ್ರೆಯೊಂದಕ್ಕೆ ಮೇ 18ರಂದು ರಾತ್ರಿ 9ಕ್ಕೆ ಅದರ ಆಡಳಿತ ಅಧಿಕಾರಿ ಲಾಕ್‌ ಮಾಡಿ ಹೋಗಿದ್ದರು. ಮೇ 20ರ ಬೆಳಗ್ಗೆ ಬಂದು ನೋಡಿದಾಗ ಬೀಗ ಒಡೆದು 74,000 ರೂ. ಕಳವು ಮಾಡಲಾಗಿತ್ತು.

Advertisement

ಈ ಹಿಂದಿನ ಇತರ ಪ್ರಕರಣ
ಕುಲಶೇಖರದಲ್ಲಿ ಜ. 11ರಂದು ಮನೆಯವರು ಬೆಳಗ್ಗೆ ಹೊರಗಡೆ ಹೋಗಿ ಅಪರಾಹ್ನ ಮರಳಿ ಬಂದಾಗ ಮನೆಯ ಹೆಂಚುಗಳನ್ನು ತೆಗೆದು ಅಂದಾಜು 3.50 ಲ.ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ಡಿ. 19ರಂದು ರಾತ್ರಿ ನಗರದ ಮನೆಯೊಂದರಿಂದ 160 ಗ್ರಾಂ ಚಿನ್ನಾಭರಣ, 6,000 ರೂ. ಕಳವು ಮಾಡಲಾಗಿತ್ತು. ಕದ್ರಿಯ ಬಾಡಿಗೆ ಮನೆಯಲ್ಲಿದ್ದವರು ಮೈಸೂರಿಗೆ ಊರಿಗೆಂದು ತೆರಳಿ ವಾಪಸ್‌ ಜ. 16ರಂದು ಬಂದು ನೋಡಿದಾಗ ಮನೆಯ ಬಾಗಿಲಿನ ಲಾಕ್‌ ಮುರಿದು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿತ್ತು.

ರಾತ್ರಿ ಗಸ್ತು ಕಡಿಮೆಯಾಯಿತೆ?
ಬೀಟ್‌ ಪೊಲೀಸರಿಂದ ಏರಿಯಾ ಭೇಟಿ, ರಾತ್ರಿ ಗಸ್ತು, ವಾಹನಗಳ ತಪಾಸಣೆ, ಇಂಟರ್‌ಸೆಪ್ಟರ್‌, ಹೈವೇ ಪಟ್ರೋಲಿಂಗ್‌ ಮೂಲಕ ನಿಗಾ ಮೊದಲಾದವು ಕಡಿಮೆಯಾಗಿವೆ ಎಂಬ ದೂರುಗಳು ಕೂಡ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

20ಕ್ಕೂ ಅಧಿಕ ವಾಹನಗಳ ಕಳವು
ನಗರದ ವಿವಿಧೆಡೆ ಕಳೆದ ಒಂದು ತಿಂಗಳಲ್ಲಿ 20ಕ್ಕೂ ಅಧಿಕ ವಾಹನಗಳು ಕಳವಾಗಿವೆ. ಬಹುತೇಕ ವಾಹನ ಕಳವು ಪ್ರಕರಣಗಳಲ್ಲಿ ವಾಹನ ಸವಾರರ ನಿರ್ಲಕ್ಷ್ಯವೇ ಕಳ್ಳರಿಗೆ ವರದಾನವಾಗಿರುವುದು ಗೊತ್ತಾಗಿದೆ. ಪದೇಪದೆ ದ್ವಿಚಕ್ರ ವಾಹನಗಳ ಕಳವು ನಡೆಯುತ್ತಿದ್ದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next