Advertisement

ಏಕತೆಯಲ್ಲಿ ಅನೇಕತೆ ಭಾರತದ ವಿಶೇಷತೆ

10:11 AM Apr 12, 2018 | |

ಸೊಲ್ಲಾಪುರ: ಭಾರತ ದೇಶ ಧರ್ಮಪ್ರಧಾನ ದೇಶವಾಗಿದ್ದು, ಧರ್ಮ ಮತ್ತು ದೇವರ ಬಗ್ಗೆ ಅಪಾರ ಶ್ರದ್ಧೆ ಮತ್ತು ಭಕ್ತಿಯಿದೆ. ಇಲ್ಲಿ ಎಲ್ಲವೂ ಭಿನ್ನವಾಗಿದ್ದರೂ ಕೊನೆಗೆ ಮೋಕ್ಷ ಮಾತ್ರ ಒಂದೇ ಇದೆ. ಏಕತೆಯಲ್ಲಿ ಅನೇಕ, ಅನೇಕತೆಯಲ್ಲಿ ಏಕತೆ ಇದು ಭಾರತದ ವಿಶೇಷತೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧಾರಾಮ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

Advertisement

ಅಕ್ಕಲಕೋಟ ತಾಲೂಕಿನ ದಹಿಟನೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಳಸಾರೋಹಣ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ವಿವಿಧ ಭಾಗಗಳಲ್ಲಿ 12 ಜ್ಯೋರ್ತಿಲಿಂಗಗಳಿವೆ. 12 ಜ್ಯೋರ್ತಿಲಿಂಗಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ್‌ ಒಬ್ಬರು. ದೇಶದ ಅತೀ ಹೆಚ್ಚಿನ ಗ್ರಾಮಗಳಲ್ಲಿ ಮಲ್ಲಿಕಾರ್ಜುನ ಮಂದಿರಗಳಿದ್ದು ಹೆಚ್ಚಿನ ಭಕ್ತರು ಮಲ್ಲಿಕಾರ್ಜುನನನ್ನು ಆರಾಧಿಸುತ್ತಾರೆ ಎಂದರು.

ಶಾಸಕ ಸಿದ್ಧಾರಾಮ ಮೈತ್ರೆ ಅಧ್ಯಕ್ಷತೆ ವಹಿಸಿದ್ದರು. ನಾಗಣಸೂರದ ಪೂಜ್ಯ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿ, ಅಕ್ಕಲಕೋಟದ ವೀರಕ್ತ ಮಠದ ಪೂಜ್ಯ ಬಸವಲಿಂಗ ಮಹಾಸ್ವಾಮೀಜಿ ಹಾಗೂ ಜಿಪಂ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ಉದ್ಯಮಿ ಗೋಕುಳ ಶಿಂದೆ, ಕಾಂಗ್ರೆಸ್‌ ಶಹರ ಅಧ್ಯಕ್ಷ ಭಿಮಾಶಂಕರ ಕಾಪಸೆ, ತಾಪಂ ಸದಸ್ಯ ವಿಲಾಸ ಗವ್ಹಾಣೆ, ದತ್ತಾತ್ರೇಯ ಪಾಟೀಲ ಮತ್ತಿತರರು ಇದ್ದರು. ರಮೇಶ ಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next