Advertisement

ಅಕ್ರಮ ಗಣಿ ಕುಸಿದು ಮೂವರು ಸಾವು; ಗಣಿಯೊಳಗೆ ಸಿಕ್ಕಿಹಾಕಿಕೊಂಡ ಹಲವರು

04:56 PM Jun 09, 2023 | Team Udayavani |

ಧನ್ಬಾದ್: ಅಕ್ರಮವಾಗಿ ನಡೆಸುತ್ತಿದ್ದ ಗಣಿ ಕುಸಿದು ಕನಿಷ್ಠ ಮೂರು ಸಾವನ್ನಪ್ಪಿ ಹಲವು ಮಂದಿ ಸಿಲುಕಿಕೊಂಡ ಘಟನೆ ಭೌರಾ ಕಾಲೇರಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.

Advertisement

ಭೌರಾ ಕಾಲೇರಿ ಪ್ರದೇಶದ ಭಾರತ್ ಕೊಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್) ನಲ್ಲಿ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ ಎಂದು ವರದಿ ತಿಳಿಸಿದೆ. ಘಟನಾ ಸ್ಥಳವು ಧನ್ಬಾದ್ ನಿಂದ 21 ಕಿ.ಮೀ ದೂರದಲ್ಲಿದೆ.

ರಕ್ಷಣಾ ಸಿಬ್ಬಂದಿಯು ಸಂತ್ರಸ್ತರನ್ನು ಪತ್ತೆಹಚ್ಚಿದ ನಂತರ ಸತ್ತವರ ಸಂಖ್ಯೆ ಮತ್ತು ಸಿಕ್ಕಿಬಿದ್ದಿರುವ ಅಥವಾ ಗಾಯಗೊಂಡವರ ನಿಖರವಾದ ಸಂಖ್ಯೆಯು ತಿಳಿಯುತ್ತದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಕುಮಾರ್ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಕುಸಿತ ಸಂಭವಿಸಿದಾಗ ಅನೇಕ ಸ್ಥಳೀಯ ಗ್ರಾಮಸ್ಥರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು.

ಇದನ್ನೂ ಓದಿ:Sharad Pawar ಅವರಿಗೆ ಬೆದರಿಕೆ; ಗಂಭೀರವಾಗಿ ಪರಿಗಣಿಸಿದ್ದೇವೆ: ಸಿಎಂ ಶಿಂಧೆ

Advertisement

“ಸ್ಥಳೀಯರ ಸಹಾಯದಿಂದ ಮೂವರನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು” ಎಂದು ಪ್ರತ್ಯಕ್ಷದರ್ಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next