Advertisement

ಡೀಲರ್‌ಗಳಿಂದ ಹಲವು ಬೇಡಿಕೆ: ಪೆಟ್ರೋಲ್‌ ಬಂಕ್‌ ಮುಷ್ಕರ

03:45 AM Jul 06, 2017 | |

ಕಾಸರಗೋಡು: ಪೆಟ್ರೋಲ್‌ ಉತ್ಪನ್ನಗಳ ಬೆಲೆ ದಿನನಿತ್ಯ ಬದಲಾಗುತ್ತಿರು ವುದರಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು, ಬೆಲೆ ನಿರ್ಣಯದಲ್ಲಿ ಪಾರದರ್ಶಕತೆ ಖಾತರಿಪಡಿಸಬೇಕು, ಕಾಲಹರಣಗೊಂಡ ಮಾರ್ಕೆಟಿಂಗ್‌ ಗೈಡ್‌ ಲೈಸನ್ಸ್‌ ಕೈಬಿಡಬೇಕು, ಡೀಲರ್‌ ಕಮಿಷನ್‌ ಹೆಚ್ಚಿಸಬೇಕು ಮೊದಲಾದ ಬೇಡಿಕೆಳನ್ನು  ಮುಂದಿಟ್ಟುಕೊಂಡು ಜು.9 ರಿಂದ ಹೋರಾಟಕ್ಕೆ ಧುಮುಕಲು ಪೆಟ್ರೋಲಿಯಂ ಬಂಕ್‌ ಮಾಲಕರ ಸಂಘಟನೆಯಾದ ಆಲ್‌ ಕೇರಳ ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಶನ್‌ ತೀರ್ಮಾನಿಸಿದೆ.

Advertisement

ಹೋರಾಟದಂತೆ ಜು. 9, 10 ಮತ್ತು 11ರಂದು ಪೆಟ್ರೋಲಿಯಂ ಕಂಪೆನಿಗಳಿಂದ ಇಂಧನ ಪಡೆಯದಿರುವ ತೀರ್ಮಾನವನ್ನು ಸಂಘಟನೆ ಕೈಗೊಂಡಿದೆ. 

ಮಾತ್ರವಲ್ಲ ಜುಲೈ 11 ರಂದು ರಾಜ್ಯ ವ್ಯಾಪಕವಾಗಿ ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಿ ಮುಷ್ಕರ ಹೂಡಲಾಗುವುದೆಂದು ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಮೂಸಾ ಬಿ. ಚೆರ್ಕಳ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣನ್‌, ಕೋಶಾಧಿಕಾರಿ ಮಂಜುನಾಥ್‌ ಕಾಮತ್‌, ಉಪಾಧ್ಯಕ್ಷರುಗಳಾದ ಲಕ್ಷಿ$¾à ನಾರಾಯಣ ಕಾಸರಗೋಡು ಮತ್ತು ಲಕ್ಷಿ$¾àನಾರಾಯಣ ಪ್ರಭು ನೀಲೇಶ್ವರ ಅವರು ಪ್ರಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next