Advertisement

ಮಾನ್ವಿ ಪ್ರಕರಣ: ಗ್ರಾಮಕರಣಿಕರು ಗೈರು!

12:29 PM Dec 25, 2018 | Team Udayavani |

ಬೆಳ್ತಂಗಡಿ: ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಕೋರರು ಟಿಪ್ಪರ್‌ ಹತ್ತಿಸಿ ಗ್ರಾಮ ಲೆಕ್ಕಾಧಿಕಾರಿಯ ಹತ್ಯೆ ಮಾಡಿರುವುದನ್ನು ಖಂಡಿಸಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘವು ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳ್ತಂಗಡಿ ತಾಲೂಕಿನ ಎಲ್ಲ 43 ಗ್ರಾಮಕರಣಿಕರು ಕೂಡ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.

Advertisement

ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತ
ತಾಲೂಕು ಕಚೇರಿ ಸೇರಿದಂತೆ ಪ್ರತಿ ಗ್ರಾಮಗಳಲ್ಲೂ ಕರ್ತವ್ಯ ನಿರ್ವಹಿಸುವ ವಿಎಗಳು ಗೈರು ಹಾಜರಾಗಿದ್ದರು. ಹೀಗಾಗಿ ತಾಲೂಕು ಕಚೇರಿಯಲ್ಲಿ ಬಹುತೇಕ ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಅರ್ಜಿ ಕಿಯೋಸ್ಕ್ನಲ್ಲಿ ಮುಷ್ಕರ ನಡೆಯುತ್ತಿದೆ ಎಂದು ಫಲಕ ಅಳವಡಿಸಲಾಗಿತ್ತು.

ಕಚೇರಿಯ ವಿಎಗಳು ಕುಳಿತುಕೊಳ್ಳುವ ಸ್ಥಳಗಳು ಸಂಪೂರ್ಣ ಖಾಲಿ ಖಾಲಿಯಾಗಿತ್ತು. ಅಟಲ್‌ ಜೀ ಕೇಂದ್ರ, ಭೂಮಿ ಶಾಖೆ, 94ಸಿ, ಅಕ್ರಮ ಸಕ್ರಮಕ್ಕೆ ಸಂಬಂಧ ಪಟ್ಟಂತೆ ತಾಲೂಕು ಕಚೇರಿಯಲ್ಲಿ ಒಟ್ಟು 10 ಮಂದಿ ಗ್ರಾಮಕರಣಿಕರು.

ಗ್ರಾಮಕರಣಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಗೈರು ಹಾಜರಾ ಗಿದ್ದರು. ಜತೆಗೆ ವಿವಿಧ ಗ್ರಾಮಗಳಲ್ಲಿ ಒಟ್ಟು 33 ಮಂದಿ ಗ್ರಾಮ ಕರಣಿಕರು ಕೆಲಸ ಮಾಡುತ್ತಿದ್ದು, ಅವರು ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಬಹುತೇಕ ಕೆಲಸ ಕಾರ್ಯಗಳು ಸೋಮವಾರ ಸ್ಥಗಿತಗೊಂಡಿದ್ದು, ಜನರು ಕೊಂಚ ತೊಂದರೆ ಅನುಭವಿಸುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next