Advertisement

ರಾಜಸ್ಥಾನ್‌ ಡೈರೀಸ್‌ನಲ್ಲಿ ಮಾನ್ವಿತಾ ಬಿಝಿ

04:15 AM Jun 05, 2020 | Lakshmi GovindaRaj |

ನಟಿ ಮಾನ್ವಿತಾ ಕಾಮತ್‌ ರಾಜಸ್ಥಾನ್‌ ಡೈರೀಸ್‌ ಚಿತ್ರಕ್ಕಾಗಿ ಡಬ್ಬಿಂಗ್‌ ಕೆಲಸವನ್ನು ಮತ್ತೆ ಶುರು ಮಾಡಿದ್ದಾರೆ. ನನ್ನ ಲಾಕ್‌ಡೌನ್‌ ಸಮಯವನ್ನು ಸ್ಕ್ರಿಪ್ಟ್ ಬರೆಯಲು ಬಳಸಿಕೊಂಡಿದ್ದ ಮಾನ್ವಿತಾ, ಮತ್ತೆ ತಾನು ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.  ರಾಜಸ್ಥಾನ್‌ ಡೈರೀಸ್‌ ಅನ್ನು ನಂದಿತಾ ಯಾದವ್‌ ನಿರ್ದೇಶಿಸುತ್ತಿದ್ದು, ಸುಮುಖ ಮುಖ್ಯ ಪಾತ್ರದಲ್ಲಿದ್ದಾರೆ.

Advertisement

ಈ ಚಿತ್ರ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಅಲ್ಲದೆ ಹಿಂದಿ  ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರವನ್ನು ಡಬ್‌ ಮಾಡಲಾಗುತ್ತಿದೆ. ಅಂದಹಾಗೆ, ರಾಜಸ್ಥಾನ್‌ ಡೈರೀಸ್‌ ಹದಿವಯಸ್ಸಿನವರ ಪ್ರಣಯ ಕಥಾನಕವಿದಾಗಿದ್ದು ಮುಂಬೆ„ ಮತ್ತು ರಾಜಸ್ಥಾನದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ  ನಡೆಸಲಾಗಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಮತ್ತು ರಾಘವೇಂದ್ರ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಅರುಣ್‌ ಸಾಗರ್‌, ರಾಜೇಶ್‌ ನಟರಂಗ ಮತ್ತು ಮಿಥುನ್‌ ಚಕ್ರವರ್ತಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ  ಅಭಿನಯಿ ಸಿದ್ದಾರೆ. ಇನ್ನು, ಇತ್ತೀಚೆಗೆ ನಟಿ ಮಾನ್ವಿತಾ ಅವರ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌ ಆಗಿ, ಅದರಿಂದ ಕೆಲವರಿಗೆ ಮೆಸೇಜ್‌ ಹೋಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಮಾನ್ವಿತಾ, ತಮ್ಮ ಖಾತೆಯನ್ನು ಮರಳಿ  ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ತಮ್ಮ ಖಾತೆಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್‌ ಮಾಡುತ್ತಿದ್ದಂತೆ  ಅವರ ಅಕೌಂಟ್‌ ಹ್ಯಾಕ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next