Advertisement

ಮಾನ್ವಿ: ನಿನ್ನೆ 16 ಮಂದಿಗೆ ಕೋವಿಡ್ ದೃಢ

01:12 PM Jul 05, 2020 | Naveen |

ಮಾನ್ವಿ: ತಾಲೂಕಿನಲ್ಲಿ ಶನಿವಾರ ಒಂದೇ ದಿನ 16 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಪಟ್ಟಣದ ವಾರ್ಡ್‌ ನಂ.14 (ಪಿಟಿಎಂ ರೋಡ್‌), ವಾರ್ಡ್‌
ನಂ. 8 (ಅಂಬೇಡ್ಕರ್‌ ನಗರ) ಹಾಗೂ ವಾರ್ಡ್‌ ನಂ. 5 (ಕಾಕತೀಯ ನಗರ) ಸೇರಿ ಒಟ್ಟು 11 ಜನರಿಗೆ ಸೋಂಕು ತಗುಲಿದೆ. ಇನ್ನು ತಾಲೂಕಿನ ಉಮ್ಮಳಿ ಹೊಸೂರನಲ್ಲಿ 1, ಸಾಂಗಾಪುರ 1, ಬಾಗಲವಾಡ 3 ಮಂದಿಗೆ ಸೇರಿ ಒಟ್ಟು 16 ಕೋವಿಡ್ ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ.

Advertisement

ಸೋಂಕಿತ ವ್ಯಕ್ತಿಗಳಿಂದ ಟ್ರಾವೆಲ್‌ ಹಿಸ್ಟರಿ ಕಲೆ ಹಾಕಲಾಗುತ್ತಿದ್ದು, ಪ್ರಕರಣ ದೃಢವಾದ ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್‌
-19 ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕು ಹರಡದಂತೆ ಸ್ವಯಂ ಎಚ್ಚರ ವಹಿಸಬೇಕು. ಸೋಂಕಿತರ ಸಂಪರ್ಕದಲ್ಲಿರುವವರು ಸ್ವಯಂ ಪ್ರೇರಣೆಯಿಂದ ಕೋವಿಡ್‌-19 ಪರೀಕ್ಷೆ ಮಾಡಿಸಿಕೊಳಲು ವೈದ್ಯಾಧಿಕಾರಿಗಳು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next