ಮಾನ್ವಿ :ತಾಲೂಕಿನ ಖರಾಬದಿನ್ನಿ ಗ್ರಾಮದ ಹನುಮಂತಮ್ಮ ಗಂಡ ಅಮರಗುಂಡಪ್ಪ ಎಂಬ ರೈತರಿಗೆ ಸೇರಿದ 7ಎಕರೆ ಜೋಳದ ರಾಶಿಗೆ ತಡರಾತ್ರಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
Advertisement
ಅವಘಡದಿಂದ 7 ಎಕರೆಯಲ್ಲಿ ಬೆಳೆದಿದ್ದ ನಾಲ್ಕೂವರೆ ಲಕ್ಷ ರೂ.ಮೌಲ್ಯದ ಜೋಳದ ತೆನೆಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸುವಷ್ಟರಲ್ಲಿ ಜೋಳದ ತೆನೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ನರಸಪ್ಪ ಹಾಗೂ ಸುರೇಶ್ ಗ್ರಾಮಸ್ಥರು ಸೇರಿದಂತೆ ಇನ್ನಿತರರಿದ್ದರು.