ಮೈಸೂರು: ರೈಲ್ವೆ ಕಾರ್ಯಾಗಾರ ಮೆಮು ರೈಲು ಮೋಟಾರ್‌ಗೆ ಕೋಚ್ ವ್ಹೀಲ್ ಸೆಟ್ ತಯಾರು ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ರೈಲ್ವೆಯಲ್ಲಿ ಮೆಮು ರೈಲುಗಾಡಿಯ ವ್ಹೀಲ್ ಸೆಟ್ ತಯಾರಿಸಿದ ಮೊದಲ ಕಾರ್ಯಾಗಾರ ಎಂಬ ಹೆಗ್ಗಳಿಗೆ ಮೈಸೂರು ರೈಲ್ವೆ ಕಾರ್ಯಾಗಾರ ಪಾತ್ರವಾಗಿದೆ.
ಮೂರು ಪೇಸ್‌ನ ಮೆಮು ರೈಲುಗಾಡಿಗೆ ಈ ಉಪಕರಣ ಬಳಕೆಯಾಗಲಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲಿಗಿದೆ. ಸಧ್ಯಕ್ಕೆ 06 ಚಕ್ರದ ಸೆಟ್ ಮೊದಲ ಹಂತದಲ್ಲಿ ತಯಾರಾಗಿದ್ದು, ಇವನ್ನು ಬೆಮೆಲ್‌ಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಮೆಲ್ ಸಂಸ್ಥೆ ಮೈಸೂರು ವರ್ಕ್‌ಶಾಪ್ ಬಳಿ 225 ಟ್ರೈಲರ್ ಕೋಚ್ ಕಾರ್‌ಗೆ 900 ಟ್ರೈಲರ್ ಕೋಚ್ ವ್ಹೀಲ್‌ಸೆಟ್‌ಗಳು ಮತ್ತು 75 ಮೋ ಟಾರ್ ಕೋಚ್ ಕಾರ್‌ಗೆ 300 ಮೋಟಾರ್ ಕೋಚ್ ವ್ಹೀಲ್ ಸೆಟ್‌ಗಳನ್ನು ತಯಾರಿಸಿಕೊಡಲು ಬೇಡಿಕೆ ನೀಡಿತ್ತು. ಬೆಮೆಲೆ ಸಂಸ್ಥೆಯು ಘಾಜಿಯಾಬಾದ್ ಮತ್ತು ದೆಹಲಿಯಲ್ಲಿ ಸಂಚರಿಸುವ ಮೆಮು ಕೋಚ್‌ಗಳಿಗೆ 08ಮ ಕಾರ್ ಫಾರ್ ಮೇಷನ್ (ಬಿಪಿಎಸ್ ಸಹಿತ) ತಯಾರಿಸುತ್ತಿದೆ. ಇದಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಬೆಮೆಲ್ ಸಂಸ್ಥೆಯು ತನ್ನ ಖರ್ಚಿನಿನಲ್ಲೆ ಪೂರೈಕೆ ಮಾಡಬೇಕಾಗಿದೆ.
ಈ ವಸ್ತುಗಳನ್ನು ಬಳಿಸಿ ಮೈಸೂರು ರೈಲ್ವೆ ವರ್ಕ್‌ಶಾಪ್ ಮೆಮು ಮೋಟಾರ್ ಕೋಚ್ ವ್ಹೀಲ್ ಸೆಟ್‌ಗಳನ್ನು ತಯಾರಿಸಿದೆ. 188 ಟ್ರೈಲರ್ ಕೋಚ್ ವ್ಹೀಲ್‌ಗಳು ಮತ್ತು 52 ಮೋಟಾರ್ ಕೋಚ್ ವ್ಹೀಲ್ ಗಳು ಈಗಾಗಲೇ ಉತ್ಪಾದನೆಯಾಗಿವೆ. ವರ್ಕ್‌ಶಾಪ್‌ನ ಮುಖ್ಯ ನಿರ್ವಹಕ ಟಿ. ಶ್ರೀನಿವಾಸು ಅವರು ಪಿಸಿಎಂಇ ರವಿಕುಮಾರ್ ಅವರ ನಿರ್ದೇಶನದಂತೆ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಈ ಕಾರ್ಯಕ್ಕೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.