Advertisement
ಹೀಗೆ ಗುರುತಿಸಲಾದ ಪಂಚಾಯಿತಿಯಲ್ಲಿ ಕ್ಯಾಂಪ್ ಗಳನ್ನು ನಡೆಸುವ ದಿನಾಂಕ, ಸ್ಥಳ, ಸಮಯ ಮತ್ತು ಇತ್ಯಾದಿ ವಿವರಗಳನ್ನು ಪ್ರಚುರಪಡಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಮಾತ್ರ ಸ್ವಯಂ ಘೋಷಿತ ಅರ್ಜಿಗಳನ್ನು ಕ್ಯಾಂಪ್‌ಗ್ಳಲ್ಲಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಗಣತಿದಾರರ ನೇಮಕ: ಮ್ಯಾನ್ಯು ಯಲ್ ಸ್ಕ್ಯಾವೆಂಜಿಂಗ್ ಸಮೀಕ್ಷೆ ಸಂಬಂಧ ಜಿಲ್ಲಾ ಪಂಚಾಯತ್ ಉಪ ಕಾರ್ಯ ದರ್ಶಿ (ಅಭಿವೃದ್ಧಿ) ಅವರನ್ನು ಜಿಲ್ಲಾ ನೋಡಲ್ ಅಧಿಕಾರಿ ಯನ್ನಾಗಿ ನೇಮಿಸ ಲಾಗಿದೆ. ಕಾರ್ಯ ನಿರ್ವಾಹಕ ಅಧಿ ಕಾರಿಗಳನ್ನು ಮೇಲ್ವಿಚಾರಕರನ್ನಾಗಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್ 1/ ಗ್ರೇಡ್ 2) ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಗಣತಿದಾರರನ್ನಾಗಿ ನೇಮಿಸ ಲಾಗಿದೆ. ಎಲ್ಲ ಗಣತಿದಾರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆ ಬಗ್ಗೆ ಹೆಚ್ಚು ಪ್ರಚಾರ ನೀಡಿ: ಸಮೀಕ್ಷೆ ಕುರಿತು ಜನರಿಗೆ ಮಾಹಿತಿ ಒದಗಿಸಲು ಗ್ರಾಮ ಪಂಚಾಯಿತಿ ಹಂತದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಸಮೀಕ್ಷೆ ನಡೆಯುವ ಸ್ಥಳ, ಕ್ಯಾಂಪ್ ಅಧಿಕಾರಿ ಹೆಸರು, ದಿನಾಂಕ, ಸಮಯ ಮತ್ತು ಕ್ಯಾಂಪ್‌ಗೆ ಒಳಪಡುವ ಗ್ರಾಮ ಪಂಚಾಯಿತಿಗಳ ವಿವರಗಳನ್ನು ಟಾಂಟಾಂ, ಕರಪತ್ರ ವಿತರಣೆ, ಆಟೋ ಮೂಲಕ ಪ್ರಚಾರ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫೋಸ್ಟರ್ ಅಳವಡಿಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೂಲಕ ಪ್ರಚಾರ ನೀಡುವಂತೆ ತಿಳಿಸಿದ್ದಾರೆ.
45 ಕಡೆ ಶಿಬಿರಗಳ ಆಯೋಜನೆ
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ, ಸಂತೇಬಾಚಹಳ್ಳಿ, ಹಿರಿಕಳಲೆ, ಶೀಳನೆರೆ, ಅಕ್ಕಿಹೆಬ್ಟಾಳು, ಬೂಕನಕೆರೆ, ಮದ್ದೂರು ತಾಲೂಕಿನ ಬಿದರಹಳ್ಳಿ, ಭಾರತೀನಗರ, ಅಣ್ಣೂರು, ಗೊರವನಹಳ್ಳಿ, ಹೆಮ್ಮನಹಳ್ಳಿ, ಚಾಮನಹಳ್ಳಿ, ಕೊಪ್ಪ, ಹೊಸಕೆರೆ, ಮಳವಳ್ಳಿ ತಾಲೂಕಿನ ಕಿರುಗಾವಲು, ತಳಗವಾದಿ, ಹಾಡ್ಲಿ, ಹುಸ್ಕೂರು, ಬೆಳಕವಾಡಿ, ಕಲ್ಕುಣಿ, ಹಲಗೂರು, ಹೊಸಹಳ್ಳಿ, ಮಂಡ್ಯ ತಾಲೂಕಿನ ಬಸರಾಳು, ಬಿ.ಹೊಸೂರು, ಬೂದನೂರು, ಸಾತನೂರು, ಹೊಳಲು, ಬೇವುಕಲ್ಲು, ಕೊತ್ತತ್ತಿ, ತಗ್ಗಹಳ್ಳಿ, ನಾಗಮಂಗಲ ತಾಲೂಕಿನ ದೇವಿಹಳ್ಳಿ, ಬಿಂಡಿಗನವಿಲೆ, ಹೊಣಕೆರೆ, ತುಪ್ಪದಮಡು, ದೇವಲಾಪುರ, ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ, ಮೇಲುಕೋಟೆ, ಚಿನಕುರಳಿ, ಹರವು, ಕೆನ್ನಾಳು, ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ, ಮಹದೇವಪುರ, ಅರಕೆರೆ, ಕೊಡಿಯಾಲ, ಕಿರಂಗೂರು ಗ್ರಾಪಂಗಳಲ್ಲಿ ನಡೆಯಲಿದೆ.