Advertisement

ಮನು ಬರಿಗೈಲಿ ಮರಳಿದ್ದಿಲ್ಲ: ತಂದೆಯ ಹೆಮ್ಮೆಯ ನುಡಿ

06:35 AM Apr 09, 2018 | |

ಯುವ ಶೂಟರ್‌ ಮನು ಭಾಕರ್‌ ಕಾಮನ್ವೆಲ್ತ್‌ ಗೇಮ್ಸ್‌ನ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಬಳಿಕ ಖುಷಿ ವ್ಯಕ್ತ ಪಡಿಸಿರುವ ತಂದೆ ರಾಮ್‌ ಕಿಶನ್‌ ಭಾಕರ್‌, ಮನು ಯಾವತ್ತಿಗೂ ಬರಿಗೈಲಿ ವಾಪಸ್ಸಾಗಿದ್ದಿಲ್ಲ ಎನ್ನುವ ಜತೆಗೆ ಮಗಳು ಗೆಲ್ಲವ ವಿಶ್ವಾಸವಿತ್ತು ಎಂದಿದ್ದಾರೆ.

Advertisement

ಮನು ಅವರ ಕ್ರೀಡಾ ಉತ್ಸಾಹವನ್ನು ಸ್ಮರಿಸಿಕೊಂಡ ರಾಮ್‌ ಭಾಕರ್‌, “ಎಳೆವೆಯಲ್ಲಿದ್ದಾಗಿನಿಂದಲೂ ಅವಳು ಯಾವುದೇ ಕ್ರೀಡಾಕೂಟದಿಂದ ಬರಿಗೈಯಲ್ಲಿ ವಾಪಸ್ಸಾಗುವ ಅಭ್ಯಾಸವನ್ನೇ ಬೆಳೆಸಿಕೊಂಡಿರಲಿಲ್ಲ’ ಎಂದರು.

“ಮಗಳು ಚಿನ್ನ ಗೆದ್ದಿದ್ದನ್ನು ಹೇಳಲು ಹೆಮ್ಮೆ ಎನಿಸುತ್ತದೆ. ಆದರೆ ಹಿಂದಿನಿಂದಲೂ ಆಕೆ ಸ್ಪರ್ಧೆಯಲ್ಲಿ ಪಾಲ್ಗೊಂಡಾಗಲೆಲ್ಲ ಒಂದಿಲ್ಲೊಂದು ಪದಕವನ್ನು ತಂದೇ ತರುತ್ತಿದ್ದಳು. ಹೀಗಾಗಿ ಇಲ್ಲೂ ಅವಳು ಗೆಲ್ಲುವ ವಿಶ್ವಾಸವಿತ್ತು’ ಎಂದು ರಾಮ್‌ ಕಿಶನ್‌ ಸಂಭ್ರಮ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next