Advertisement

ಮನುವಾದಿಗಳಿಗೆ ಭಾತೃತ್ವ ಬೇಕಿಲ್ಲ: ಪಾಟೀಲ

11:22 AM Nov 11, 2018 | |

ಅಫಜಲಪುರ: ಟಿಪ್ಪು ಸುಲ್ತಾನ್‌ ಭಾರತದ ಚರಿತ್ರೆಯ ಪುಟದಲ್ಲಿ ಅಜರಾಮರವಾಗಿ ಉಳಿದ ಅರಸ. ಆತನ ತ್ಯಾಗ,‌ ಬಲಿದಾನವನ್ನು ದೇಶ ಯಾವತ್ತೂ ಮರೆಯುವುದಿಲ್ಲ. ಟಿಪ್ಪುವನ್ನು ವಿರೋಧಿ ಸುವ ಮನುವಾದಿಗಳಿಗೆ ಭಾವೈಕ್ಯತೆ, ಭಾತೃತ್ವ ಬೇಕಾಗಿಲ್ಲ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

Advertisement

ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಚರಿತ್ರೆಯು ಮನುವಾದಿಗಳ ಕೈಯಲ್ಲಿ ಸಿಕ್ಕಿದೆ. ಹೀಗಾಗಿ ಸಮಾನತೆ, ಶಾಂತಿ, ಸಹೋದರತೆಗೆ ಎಲ್ಲ ಕಡೆ ಕೊಳ್ಳಿ ಇಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರಿಂದಾಗಿಯೇ ದೇಶದಲ್ಲಿ ಐಕ್ಯತೆ ಹಾಳಾಗಿ ಕೋಮುದ್ವೇಷಗಳು ಹೆಚ್ಚಾಗಿವೆ ಎಂದು ಆಪಾದಿಸಿದರು.
 
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅನೇಕ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ ಬಗ್ಗೆ ಹಾಡಿ ಹೊಗಳಿ, ಜಯಂತಿ ಆಚರಿಸಿ ಪೇಟ ತೊಟ್ಟು ಖಡ್ಗ ಹಿಡಿದು ಸಂಭ್ರಮಿಸಿದ್ದರು. ಈಗ ವಿರೋಧಿಸುತ್ತಿದ್ದಾರೆ. ಬಿಜೆಪಿಯವರಿಗೆ ಕೇವಲ ಜಾತಿ ಜಗಳ ಹಚ್ಚಿ ರಾಜಕೀಯ ಮಾಡುವುದು ಮಾತ್ರ ಗೊತ್ತಿದೆ ಎಂದು ಟೀಕಿಸಿದರು.

ಮುಖಂಡ ಶಿವಕುಮಾರ ನಾಟೀಕಾರ, ಡಾ| ವಿಜಯಕುಮಾರ ಸಾಲಿಮನಿ ಮಾತನಾಡಿ, ಟಿಪ್ಪು ಧರ್ಮ ವಿರೋಧಿಯಲ್ಲ. ಆತ ಹಿಂದೂ ಧರ್ಮ ರಕ್ಷಕನಾಗಿದ್ದ. ಸಾಕಷ್ಟು ಹಿಂದೂ ದೇವಾಲಯಗಳನ್ನು ಕಟ್ಟಿದ್ದಾನೆ. ಟಿಪ್ಪು ಜಯಂತಿ ವಿರೋಧ ಮಾಡುವರು ಇತಿಹಾಸ ತಿಳಿದು ಮಾತನಾಡಲಿ ಎಂದರು.

ಮುಖಂಡರಾದ ಅರುಣಕುಮಾರ ಪಾಟೀಲ, ಮಕೂಲ ಪಟೇಲ್‌, ಮಕ್ಸೂದ ಜಾಗಿರದಾರ, ಮತೀನ ಪಟೇಲ್‌, ಪಪ್ಪು ಪಟೇಲ್‌, ಮುನೀರ ಪಟೇಲ್‌, ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿ ಮಾತನಾಡಿದರು. ಮಳೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಸಕರಿಗೆ ಟಿಪ್ಪು ಅಭಿಮಾನಿಗಳು ಖಡ್ಗ ನೀಡಿ ಸನ್ಮಾನಿಸಿದರು. ಬಿಇಒ ವಸಂತ ರಾಠೊಡ ನಿರೂಪಿಸಿದರು.

Advertisement

144ನೇ ಸೆಕ್ಷನ್‌ ಜಾರಿ: ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆನ್ನುವ ಕಾರಣಕ್ಕಾಗಿ ಪಟ್ಟಣದ ತಹಶೀಲ್ದಾರ್‌ ಕಚೇರಿ ಹೊರತು ಪಡಿಸಿ ಉಳಿದ ಎಲ್ಲೆಡೆ 144ನೇ ಸೆಕ್ಷನ್‌ ಜಾರಿಗೊಳಿಸಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next