Advertisement

ಕೈ ಕೊಟ್ಟ ಆದ್ರ್ರಾ ಮಳೆ: ಕೃಷಿಕರು ಮತ್ತಷ್ಟು ಕಂಗಾಲು

11:29 PM Jul 06, 2019 | Team Udayavani |

ಬೆಳ್ಮಣ್‌: ಈ ಬಾರಿಯ ಮುಂಗಾರು ಕರಾವಳಿ ಭಾಗದ ಕೃಷಿಕರಿಗೆ ಮರೀಚಿಕೆಯಾಗಿದ್ದು ಆದ್ರ್ರಾ ನಕ್ಷತ್ರದ ಮಳೆಯೂ ಸಾಕಷ್ಟಾಗದೆ ಕೃಷಿ ಚಟುವಟಿಕೆಗೆ ತಣ್ಣೀರೆರೆಚಿದೆ.

Advertisement

ಶನಿವಾರ ಪ್ರಾರಂಭಗೊಂಡ ಮಳೆಗಳ ಪೈಕಿ ರಾಜ ನಕ್ಷತ್ರ ಎಂದೇ ಕರೆಯಲ್ಪಡುವ ಪುನರ್ವಸು ಪ್ರಾರಂಭಗೊಂಡಿದ್ದು ಅದೂ ಆದ್ರ್ರಾ ದ ಹಾದಿ ಹಿಡಿಯುವ ಲಕ್ಷಣ ಸ್ಪಷ್ಟuವಾಗಿದೆ. ಈ ಹಿಂದೆಲ್ಲಾ ಆದ್ರ್ರಾ ನಕ್ಷತ್ರದ ಮಳೆಯಲ್ಲಿ ಕರಾವಳಿ ಭಾಗದ ಕೃಷಿಕರ ಕೃಷಿ ಚಟುವಟಿಕೆಗಳು ಪೂರ್ಣಗೊಳ್ಳುತ್ತಿದ್ದು ಈ ಬಾರಿ ಮಳೆಯೇ ಇಲ್ಲದೆ ಅರ್ಧಕ್ಕರ್ಧ ಕೃಷಿಕರು ಗದ್ದೆಗಳನ್ನು ಇನ್ನೂ ಉಳುಮೆ ಮಾಡದೇ ಆಗಸದತದತ್ತ ದೃಷ್ಟಿ ಹಾಯಿಸುತ್ತಿದ್ದಾರೆ. ನೀರಿನ ಕೊರತೆ ಇರುವುದರಿಂಧ ನೇಜಿ ಹಾಕದೆ ಬಿತ್ತನೆ ಮೂಲಕ ಭತ್ತ ಬೆಳೆಯೋಣ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಆದ್ರ್ರಾ ಮಳೆ ಕೈಕೊಟ್ಟ ಪರಿಣಾಮ ಯಾವುದೂ ಸಾಧ್ಯವಾಗಿಲ್ಲ. ಪಂಪ್‌ ಸೆಟ್ ಮೂಲಕ ನೀರು ಹಾಯಿಸಿ ಅರೆಬರೆ ನಾಟಿ ಮಾಡಿದ್ದ ಕೃಷಿಕರ ಗದ್ದೆಗಳೂ ನೀರಿಲ್ಲದೆ ಬಿರುಕು ಬಿಟ್ಟಿವೆ.

ಪುನರ್ವಸು ಶನಿವಾರ ಪ್ರಾರಂಭಗೊಂಡಿದ್ದು, ಮಳೆಯ ಸೂಚನೆ ಇಲ್ಲದ ವಾತಾವರಣವಿದೆ.

ಸವಲತ್ತುಗಳಿದ್ದರೂ ಮಳೆಯೇ ಇಲ್ಲ

ರಾಜ್ಯ ಹಾಗೂ ಕೆಂದ್ರ ಸರಕಾರಗಳು ಕೃಷಿ ಇಲಾಖೆಯ ಮೂಲಕ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೂ ಮಳೆಯೇ ಇಲ್ಲದ ಪರಿಣಾಮ ರೈತರು ಕೈಕಟ್ಟಿ ಕೂರುವಂತಾಗಿದೆ. ಜಲಮೂಲವಾಗಿದ್ದ ನದಿಗಳು ಇನ್ನೂ ಮೈದುಂಬಿ ಹರಿಯಲಿಲ್ಲ. ಹೀಗಾಗಿ ಕರಾವಳಿ ಭಾಗದ ಕೃಷಿಕರು ಆತಂಕಕ್ಕೀಡಾಗಿದ್ದಾರೆ.

Advertisement

ಆದ್ರ್ರಾ ಹೋಯಿತು, ಪುನರ್ವಸುವಿನಲ್ಲೂ ಮಳೆ ಬರುತ್ತಿಲ್ಲ ಮುಂದೇನು..? ಎಂಬುವುದೇ ಕರಾವಳಿಯ ಕೃಷಿಕರ ಪ್ರಶ್ನೆ. ಕಳೆದ ವರ್ಷ ಜುಲೈ 7ರಂದು ಕರಾವಳಿಯಲ್ಲಿ ಕುಂಭದ್ರೋಣ ಮಳೆಯಾಗಿ ವ್ಯಾಪಕ ನೆರೆಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೆ ಈ ಬಾರಿ ಅದೇ ದಿನ ನೀರಿಗಾಗಿ ಹಾಹಾಕಾರ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next