ಹೊಸದಿಲ್ಲಿ: ಅಫ್ತಾಬ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು 35 ತುಂಡುಗಳನ್ನಾಗಿ ಎಸೆದು ಸಿಕ್ಕಿಬಿದ್ದ ಘಟನೆ ಇನ್ನೂ ಹಸುರಾಗಿರುವಾಗಲೇ ದಿಲ್ಲಿಯಲ್ಲಿ ಇಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಇದು ಐಸಿಸ್ ಪ್ರೇರಣೆಯ ಹತ್ಯೆ. ಜಗ್ಗ ಮತ್ತು ನೌಶಾದ್ ಎಂಬ ಇಬ್ಬರು ಐಸಿಸ್ ಮಾದರಿಯಲ್ಲಿ ಮಾದಕ ವಸ್ತು ಸೇವನೆ ಮಾಡುವ ವ್ಯಕ್ತಿಯನ್ನು ಹತ್ಯೆ ಮಾಡಿ, ಆತನ ದೇಹವನ್ನು ಎಂಟು ತುಂಡುಗಳನ್ನಾಗಿಸಿದ್ದಾರೆ. ಈ ಹತ್ಯೆಯ ವೀಡಿಯೋ ಮಾಡಿ, ಅದನ್ನು ಲಷ್ಕರ್-ಎ- ತಯ್ಯಬಾ ಸಂಘಟನೆಯ ನಾಯಕರಿಗೆ ಕಳುಹಿಸಿದ್ದಾರೆ.
ಕಳೆದ ತಿಂಗಳ 15ರಂದು ಇವರಿಬ್ಬರು ಈ ಹತ್ಯೆ ಮಾಡಿದ್ದರು. ಗ್ಯಾಂಗ್‌ಸ್ಟರ್‌ಗಳ ಪ್ರಕರಣದ ತನಿಖೆ ನಡೆಸುವ ವೇಳೆ ಜಗ್ಗ ಮತ್ತು ನೌಶಾದ್‌ರನ್ನು ಬಂಧಿಸಿ ತನಿಖೆ ನಡೆಸಿದಾಗ ಕೊಲೆಯ ರಹಸ್ಯ ಬಹಿರಂಗವಾಯಿತು. ಬಂಧಿತರಿಂದ ಮೂರು ಪಿಸ್ತೂಲು, 22 ಗುಂಡುಗಳು, 2 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿರಚ್ಛೇದ ಮಾಡಿದ್ದಕ್ಕೆ ಜಗ್ಗ ಮತ್ತು ನೌಶಾದ್ ಉಗ್ರ ಸಂಘಟನೆ ಲಷ್ಕರ್-ಎ-ತಯ್ಯಬಾ ಜತೆಗೆ ನಿಕಟ ಸಂಪರ್ಕ ಹೊಂದಿರುವ ಸೊಹೈಲ್ ಎಂಬಾತನಿಂದ 2 ಲಕ್ಷ ರೂ. ಸಂದಾಯವಾಗಿದೆ.
ನೌಶಾದ್ ಎಂಬಾತನ ವಿರುದ್ಧ ಹಲವು ಕೇಸು ದಾಖಲಾಗಿವೆ ಮತ್ತು ಆತನಿಗೆ ಹರ್ಕತುಲ್ ಅನ್ಸಾರ್ ಎಂಬ ಉಗ್ರ ಸಂಘಟನೆಯ ನಂಟು ಇರುವುದು ತನಿಖೆಯಿಂದ ದೃಢಪಟ್ಟಿದೆ. ಆತ ಹಲವು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಈ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರಿಫ್ ಮೊಹಮ್ಮದ್ ಎಂಬಾತನ ಸಂಪರ್ಕವಾಗಿತ್ತು. ಜ. 26ರ ಗಣರಾಜ್ಯ ದಿನಕ್ಕೆ ಸಮೀಪವೇ ಈ ಇಬ್ಬರನ್ನು ಬಂಧಿಸಿರುವುದು ಗಮನಾರ್ಹವಾಗಿದೆ.
Related Articles