Advertisement

“ಮನುಷ್ಯನ ಹುಟ್ಟು  ಒಂದು ಕಡೆ, ಬದುಕು ಮತ್ತೂಂದು ಕಡೆ’

09:13 AM Jul 04, 2017 | |

ಕನಕಪುರ: ಮನುಷ್ಯನ ಹುಟ್ಟು ಒಂದು ಕಡೆಯಾದರೆ ಬದುಕು ಮತ್ತೂಂದು ಕಡೆಯಾಗುತ್ತದೆ. ಇದು ಪ್ರಕೃತಿ ನಿಯಮ ಎಂದು ಆರ್‌ಇಎಸ್‌ ಸಂಸ್ಥೆಯ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಹೇಳಿದರು. 

Advertisement

ನಗರದ ರೂರಲ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್‌ ಮುನಿರಾಜಪ್ಪ, ಡಾ.ಪುಟ್ಟಸ್ವಾಮಿ ಹಾಗೂ ಪ್ರೊ.ಜೋಗಯ್ಯ ವಯೋ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಮಾತನಾಡಿದರು. ರೂರಲ್‌ ಪದವಿ ಕಾಲೇಜಿನಲ್ಲಿ ಕಳೆದ 33 ವರ್ಷಗಳಿಂದ ಮುನಿರಾಜಪ್ಪ, ಪುಟ್ಟಸ್ವಾಮಿ, ಜೋಗಯ್ಯನವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿ 
ವಯೋನಿವೃತ್ತಿ ಹೊಂದಿದ್ದಾರೆ. ಅವರ ನಿವೃತ್ತಿ ಜೀವನ ಶುಭಕರವಾಗಿರಲಿ ಎಂದು ಹಾರೈಸಿದರು. ಸಂಸ್ಥೆಯ ಸಿ.ರಮೇಶ್‌ ಮಾತನಾಡಿ, ಸರ್ಕಾರದ ವಯೋ ನಿವೃತ್ತಿ ಜೀವನ ಮುಗಿದರೂ ಸಂಸ್ಥೆಗೆ ಅವರ ಸಲಹೆ ಮಾರ್ಗದರ್ಶನಗಳು ಅವಶ್ಯ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಡಾ.ಮೇ ಜರ್‌ ಮನಿರಾಜಪ್ಪ ಮಾತನಾಡಿ, ವೃತ್ತಿಜೀವನದಲ್ಲಿ ಸಹೋದ್ಯೋಗಿಗಳು ಅತ್ಯಂತ ಸಹಕಾರ ನೀಡಿದ್ದಾರೆ. ಪ್ರಾಧ್ಯಾಪಕರು ಸೇರಿದಂತೆ ಆಡಳಿತ ಮಂಡಳಿ ಸಹಕಾರದಿಂದ 4 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತೆಂದು ಸ್ಮರಿಸಿದರು.  ಡಾ.ಪುಟ್ಟಸ್ವಾಮಿ, ಪ್ರೊ. ಜೋಗಯ್ಯ
ತಮ್ಮ ವೃತ್ತಿಜೀವನ ಬದುಕಿನ ಆರಂಭದಿಂದ ಅಂತ್ಯದ ವರೆಗೆ ನೆನಪುಗಳನ್ನು ಸ್ಮರಿಸಿಕೊಂಡರು. 

ಈ ಸಂದರ್ಭದಲ್ಲಿ ಪ್ರೊ. ಜೋಗಯ್ಯ ನನ್ನ ವೃತ್ತಿಜೀವನ ಕೊನೆಯ ಸಂಬಳವಾದ 51 ಸಾವಿರ ರೂ. ದೇಣಿಗೆಯಾಗಿ ನೀಡುತ್ತಿದ್ದೇನೆ. ಆಡಳಿತ ಮಂಡಳಿ ತೆಗೆದುಕೊಳ್ಳುವಂತೆ ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next