Advertisement

ವಿಶ್ವ ಲೀಗ್‌ ಸೆಮಿಫೈನಲ್ಸ್‌ ಭಾರತ ಹಾಕಿಗೆ ಮನ್‌ಪ್ರೀತ್‌ ನಾಯಕ

03:45 AM May 19, 2017 | Team Udayavani |

ಹೊಸದಿಲ್ಲಿ: ಇಂಗ್ಲೆಂಡಿನಲ್ಲಿ ನಡೆಯಲಿರುವ ವಿಶ್ವ ಲೀಗ್‌ ಸೆಮಿಫೈನಲ್ಸ್‌ ಮತ್ತು ಜರ್ಮನಿಯಲ್ಲಿ ನಡೆಯಲಿರುವ ಮೂರು ರಾಷ್ಟ್ರಗಳ ಆಹ್ವಾನಿತ ಹಾಕಿ ಕೂಟಕ್ಕೆ ಯುವ ಮಿಡ್‌ಫಿàಲ್ಡರ್‌ ಮನ್‌ಪ್ರೀತ್‌ ಸಿಂಗ್‌ ಅವರು ಭಾರತೀಯ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಗೊಂಡಿರುವ ಪಿಆರ್‌ ಶ್ರೀಜೇಶ್‌ ಬದಲಿಗೆ ಮನ್‌ಪ್ರೀತ್‌ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಮಂಡಿ ನೋವಿನಿಂದಾಗಿ ನಾಯಕ ಮತ್ತು ಗೋಲ್‌ಕೀಪರ್‌ ಶ್ರೀಜೇಶ್‌ ತಂಡದಿಂದ ಹೊರಬಿದ್ದ ಕಾರಣ ಮನ್‌ಪ್ರೀತ್‌ ಅವರನ್ನು ಆಯ್ಕೆ ಮಾಡಲಾಯಿತು. ಮೂರು ರಾಷ್ಟ್ರಗಳ ಆಹ್ವಾನಿತ ಹಾಕಿ ಕೂಟದಲ್ಲಿ ಭಾರತವು ಜರ್ಮನಿ ಮತ್ತು ಬೆಲ್ಜಿಯಂ ಜತೆ ಆಡಲಿದೆ. ಆಬಳಿಕ ಭಾರತೀಯ ಹಾಕಿ ತಂಡ ಲಂಡನ್‌ಗೆ ತೆರಳಲಿದ್ದು ಕೆನಡ, ಹಾಲೆಂಡ್‌, ಪಾಕಿಸ್ಥಾನ ಮತ್ತು ಸ್ಕಾಟ್ಲೆಂಡ್‌ ಜತೆ ಆಡಲಿದೆ.

ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಕೂಟದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದ ವೇಳೆ ಶ್ರೀಜೇಶ್‌ ಗಾಯಗೊಂಡಿದ್ದರು. ಅವರ ಜಾಗವರನ್ನು ಗೋಲ್‌ಕೀಪರ್‌ಗಳಾದ ಆಕಾಶ್‌ ಚಿಕ್ಲೆ ಮತ್ತು ವಿಕಾಸ್‌ ದಹಿಯ ತುಂಬಲಿದ್ದಾರೆ. ರಮಣ್‌ದೀಪ್‌ ಸಿಂಗ್‌ ಆಕ್ರಮಣಕಾರಿ ವಲಯಕ್ಕೆ ಮರಳಿದ್ದಾರೆ.

ಅಜ್ಲಾನ್‌ ಶಾ ಹಾಕಿ ಕೂಟದ ಬಳಿಕ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲು ಯೋಚಿಸಲಾಗಿದೆ. ಅಜ್ಲಾನ್‌ ಶಾ ಸಹಿತ ಈ ವರ್ಷ ಮೂರು ಕೂಟಗಳಲ್ಲಿ ಭಾಗವಹಿಸಲು ಪ್ರವಾಸಗೈಯಲಿದ್ದೇವೆ. ಯುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಕೋಚ್‌ ರೋಲ್ಯಾಂಟ್‌ ಓಲ್ಟಮನ್ಸ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next