“ಟಕ್ಕರ್’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಮನೋಜ್, ಈಗ “ಧರಣಿ’ಯ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ. ಮನೋಜ್ ಅಭಿನಯದ ಹೊಸ ಸಿನಿಮಾಕ್ಕೆ “ಧರಣಿ’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ “ಧರಣಿ’ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಇನ್ನು ತಮ್ಮ ಹೊಸ ಸಿನಿಮಾ “ಧರಣಿ’ಯ ಬಗ್ಗೆ ಮಾತನಾಡುವ ನಟ ಮನೋಜ್, “ನನ್ನ ಹಿಂದಿನ ಸಿನಿಮಾದ ಜೊತೆಗೆ “ಧರಣಿ’ಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೋಳಿ ಪಂದ್ಯದಂತೆಯೇ ಇಲ್ಲಿ ಕೂಡಾ ನೋಡುಗರನ್ನು ಮನರಂಜಿಸುತ್ತಲೇ ಕಾಡುವ ಅಂಶಗಳಿವೆ. ನನ್ನ ಲುಕ್ ಕೂಡಾ ಇಲ್ಲಿ ಬೇರೆಯದ್ದೇ ರೀತಿಯಲ್ಲಿದೆ. ಇದೊಂದು ಕಂಟೆಂಟ್ ಆಧಾರಿತ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ. ಇತ್ತೀಚೆಗೆ ಕಂಟೆಂಟ್ ಇರುವ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಅವುಗಳಂತೆ, ಈ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.
ಈ ಹಿಂದೆ ವಿನಯ್ ರಾಜಕುಮಾರ್ ಅಭಿನಯಿಸಿದ್ದ “ಅನಂತು ವರ್ಸಸ್ ನುಸ್ರತ್’ ಚಿತ್ರವನ್ನು ನಿರ್ದೇಶಿಸಿದ್ದ ಸುಧೀರ್ ಶಾನುಭೋಗ್ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಬ್ಜೆಕ್ಟ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. “ಯಂಗ್ ಥಿಂಕರ್ ಫಿಲಂಸ್’ ಬ್ಯಾನರ್‌ನಲ್ಲಿ ಜಿ. ಕೆ. ಉಮೇಶ್, ಕೆ. ಗಣೇಶ್ ಐತಾಳ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ