Advertisement

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

10:14 PM Aug 09, 2022 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಮನೋಜ್‌ ಪ್ರಭಾಕರ್‌ ಅವರನ್ನು ನೇಪಾಳ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.

Advertisement

ಪುಬುಡು ದಸ್ಸಾನಾಯಕ ಅವರ ಉತ್ತರಾಧಿಕಾರಿಯಾಗಿ ಪ್ರಭಾಕರ್‌ ನೇಮಕಗೊಂಡಿದ್ದಾರೆ. ಕೆನಡಾ ತಂಡದ ಮುಖ್ಯ ಕೋಚ್‌ ಹುದ್ದೆ ವಹಿಸುವ ಉದ್ದೇಶದಿಂದ ಅವರು ಜುಲೈಯಲ್ಲಿ ನೇಪಾಳ ತಂಡದ ಕೋಚ್‌ ಹುದ್ದೆಯಿಂದ ಕೆಳಗಿಳಿದಿದ್ದರು.

1984ರಿಂದ 1996ರ ನಡುವೆ ಭಾರತ ಪರ 39 ಟೆಸ್ಟ್‌ ಮತ್ತು 130 ಏಕದಿನ ಪಂದ್ಯಗಳಲ್ಲಿ ಆಡಿದ್ದ ಪ್ರಭಾಕರ್‌ ಈ ಹಿಂದೆ ದೆಹಲಿ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಣಜಿ ತಂಡಗಳಿಗೆ ತರಬೇತುದಾರರಾಗಿದ್ದರು. 2016ರಿಂದ ಅವರು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಬೌಲಿಂಗ್‌ ಕೋಚ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ನೇಪಾಳದಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ, ಆಟಗಾರರ ಪ್ರತಿಭೆ ಮತ್ತು ಕೌಶಲದ ಮಟ್ಟವನ್ನು ನೋಡಿದ ಬಳಿಕ ನೇಪಾಳ ಕ್ರಿಕೆಟ್‌ ತಂಡದೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ. ನೇಪಾಳ ತಂಡವನ್ನು ಕ್ರಿಕೆಟ್‌ ಶಕ್ತಿಯನ್ನಾಗಿ ಮಾಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದು ಪ್ರಭಾಕರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next