ಮಂಗಳೂರು: ನಗರದ ಚಿಲಿಂಬಿಯ ಆರ್.ಎನ್. ಟವರ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿರುವ ಮಣಪುರಂ ಫೈನಾನ್ಸ್ ಶಾಖೆ ಬೀಗ ಒಡೆದು ಕಳವಿಗೆ ಯತ್ನಿಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.
Advertisement
ಅಪರಿಚಿತ ವ್ಯಕ್ತಿಯೊಬ್ಬ ರಾತ್ರಿ 12ರಿಂದ 12.30ರ ನಡುವೆ ಕಬ್ಬಿಣದ ರಾಡಿನ ಸಹಾಯದಿಂದ ಫೈನಾನ್ಸ್‌ನ ಶಟರ್ ಬೀಗವನ್ನು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದಾನೆ. ಆತನ ಚಹರೆ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.