Advertisement

ಮಣ್ಣಪಳ್ಳ ಕಾಯಕಲ್ಪಕ್ಕೆ “ಜನಧ್ವನಿ’

01:13 AM Feb 07, 2022 | Team Udayavani |

ಉಡುಪಿ: ಮಣಿಪಾಲ ಮಣ್ಣಪಳ್ಳ ನಿರ್ವಹಣೆ ಮತ್ತು ಅಭಿವೃದ್ಧಿ ಸಂಬಂಧಿಸಿ ಆಡಳಿತ ವ್ಯವಸ್ಥೆ ಸ್ಪಂದಿಸುವ ನಿಟ್ಟಿನಲ್ಲಿ ಉದಯವಾಣಿ ಸುದಿನ ಸರಣಿ ರೂಪದಲ್ಲಿ ವಿಸ್ತೃತ ವರದಿ ಪ್ರಕಟಿಸಿದ್ದು, ಸ್ಥಳೀಯ ಹಿರಿಯರು, ಯುವಕರು, ತಜ್ಞರು ಮಣ್ಣಪಳ್ಳ ಅಭಿವೃದ್ಧಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರತಿನಿತ್ಯ ನೂರಾರು ಮಂದಿ ವಿಹರಿಸುವ ಸುಂದರ ಸ್ಥಳ, ಚಿಟ್ಟೆ, ಪಕ್ಷಿಗಳ ಆವಾಸ ಸ್ಥಾನವು ಸೂಕ್ತ ರೀತಿಯಿಂದ ನಿರ್ವಹಣೆಗೊಳಪಟ್ಟು ಪರಿಸರ ಪೂರಕ ಅಭಿವೃದ್ಧಿ ಯೋಜನೆ ಜಾರಿಗೆ ಬರಬೇಕು. ಮಣ್ಣಪಳ್ಳ ಪಕ್ಕದಲ್ಲಿರುವ ಕ್ರೀಡಾಂಗಣಕ್ಕೂ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂಬ ಆಶಯ ಎಲ್ಲರದು.

Advertisement

ಕೆರೆಗೆ ತ್ಯಾಜ್ಯ ಸೇರದಿರಲಿ
ಮಣ್ಣಪಳ್ಳ ಕೆರೆಗೆ ತ್ಯಾಜ್ಯ ಸಂಪರ್ಕವಾಗದಂತೆ ಎಚ್ಚರ ವಹಿಸಬೇಕು. ಮಣಿಪಾಲ ಸಹಿತ ಸುತ್ತಮುತ್ತಲಿನ ಊರುಗಳಿಗೆ ಇದು ಪ್ರಮುಖ ಜಲಮೂಲ. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಕೆರೆಗೆ ಕೆಸರು ನೀರು ಸೇರಿದರೆ ಮಾತ್ರ ಹೂಳೆತ್ತುವ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾಗುತ್ತದೆ, ಮಳೆಗಾಲದಲ್ಲಿ ಕೆಸರು ನೀರು ಹೋಗದಂತೆ ಮತ್ತು ಸಂಪೂರ್ಣ ತ್ಯಾಜ್ಯ ಮುಕ್ತ ಪರಿಸರವಾಗಿರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ವಿಹಾರಕ್ಕೆ, ಪಕ್ಷಿಗಳ, ಚಿಟ್ಟೆಗಳಿಗೆ ಪೂರಕವಾಗಿರುವ ಸ್ಥಳವನ್ನು ಸಮರ್ಪಕವಾಗಿ ನಿರ್ವಹಿಸುವ ಕೆಲಸವಾಗಬೇಕಿದೆ.
-ಡಾ| ಉದಯ ಶಂಕರ್‌, ಪ್ರಾಧ್ಯಾಪಕ, ಭೂಗರ್ಭ ಶಾಸ್ತ್ರ, ಎಂಐಟಿ, ಮಣಿಪಾಲ

ಪಕ್ಷಿಗಳ ಆಕರ್ಷಣೀಯ ತಾಣ
ಇಲ್ಲಿ 12 ವರ್ಷಗಳಿಂದೀಚೆಗೆ 134 ಪಕ್ಷಿ ಪ್ರಭೇದಗಳನ್ನು ಪತ್ತೆ ಮಾಡಿದ್ದೇವೆ. ಚಳಿಗಾಲ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹಕ್ಕಿಗಳು ಕಾಣ ಸಿಗುತ್ತದೆ. ವಿದೇಶ ಗಳಿಂದಲೂ ಹಕ್ಕಿಗಳು ಇಲ್ಲಿಗೆ ಬಂದು 2-3 ತಿಂಗಳು ಇರುತ್ತವೆ. ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಯುರೋಪ್‌ ಮೂಲದ “ಟಫೆxಡ್‌ ಡಕ್‌’ ಇಲ್ಲಿ ಪತ್ತೆಯಾಗಿತ್ತು. ನಿರಂತರ 3 ವರ್ಷಗಳಿಂದ ಈ ಪಕ್ಷಿಗಳು ವಲಸೆ ಬರುತ್ತಿವೆ. ಪಕ್ಷಿಗಳನ್ನು ಆಕರ್ಷಿಸುವ ಸುಂದರ ಪರಿಸರ ಇದು, ಸೂಕ್ತ ನಿರ್ವಹಣೆ ಮೂಲಕ ತ್ಯಾಜ್ಯವನ್ನು ನಿಯಂತ್ರಿಸಬೇಕು. ಮಣಿಪಾಲ ಬರ್ಡರ್ಸ್‌ ಕ್ಲಬ್‌ನಿಂದ ನಡೆದ ಸ್ವತ್ಛತ ಕಾರ್ಯದ ವೇಳೆ 30 ಬ್ಯಾಗ್‌ಗೂ ಅಧಿಕ ತ್ಯಾಜ್ಯ ಸಂಗ್ರಹ ಮಾಡಿದ್ದು, ಪ್ರಮಾಣದ ತ್ಯಾಜ್ಯ ನಮ್ಮಲ್ಲಿ ಆತಂಕ ಹುಟ್ಟಿಸಿತು. ನೀರಿನಲ್ಲಿಯೂ ಶೂ, ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿದ್ದೇವೆ. ಇಲ್ಲಿನ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧಿಸಿ ಸ್ಥಳೀಯರು ಮತ್ತು ನಮ್ಮ ಟ್ರಸ್ಟ್‌ ಸಹಿತ, ಆಸಕ್ತ ಸಂಘಟನೆಗಳ ಪ್ರಮುಖರನ್ನು ಕರೆಸಿ ಸಂಬಂಧಪಟ್ಟ ಆಡಳಿತ ಸಭೆ ನಡೆಸಬೇಕಿದೆ.
-ತೇಜಸ್ವಿ ಎಸ್‌. ಆಚಾರ್ಯ, ಟ್ರಸ್ಟಿ, ಮಣಿಪಾಲ ಬರ್ಡಿಂಗ್‌ ಆ್ಯಂಡ್‌ ಕನ್ಸರ್ವೇಶನ್‌ ಟ್ರಸ್ಟ್‌

ತ್ಯಾಜ್ಯ ರಾಶಿ ಕಂಟಕ
ಇಲ್ಲಿನ ಪರಿಸರದ ಸ್ವತ್ಛತೆಗೆ ಅಲ್ಲಲ್ಲಿ ಕಂಡು ಬರುವ ತ್ಯಾಜ್ಯ ರಾಶಿ ಕಂಟಕವಾಗಿವೆ. ಕೆಲವರು ಇಲ್ಲಿಗೆ ಬಂದು ಕಸ ವನ್ನು ಎಸೆದು ಹೋಗುತ್ತಾರೆ. ವಿಲೇವಾರಿ ಕಾರ್ಯವು ಸರಿಯಾಗಿ ನಡೆಯುವುದಿಲ್ಲ. ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಮಣ್ಣಪಳ್ಳ ಪ್ರವೇಶಿಸುವಾಗ ಪ್ಲಾಸ್ಟಿಕ್‌ ಪ್ಯಾಕೆಟ್‌ ಇರುವ ತಿಂಡಿ, ತಿನಿಸುಗಳಿಗೆ ಅವಕಾಶ ಕೊಡಬಾರದು. ಪಾರ್ಕ್‌ ಮತ್ತು ಕ್ರೀಡಾಂಗಣ ಪ್ರವೇಶಿಸುವ ಗೇಟ್‌ ಹೊರತುಪಡಿಸಿ ಉಳಿದ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಬೇಕು.
-ವಿಕ್ರಮ್‌ಜಿತ್‌

ಆಡಳಿತ ವ್ಯವಸ್ಥೆ ಸ್ಪಂದಿಸಬೇಕು
ಮಣ್ಣಪಳ್ಳ ಮತ್ತು ಕ್ರೀಡಾಂಗಣದ ಸೌಕರ್ಯದ ಅಭಿವೃದ್ಧಿಗೆ ಸ್ಪಂದಿಸ ಬೇಕು. ನೀರು, ವಿದ್ಯುತ್‌ ದೀಪ, ಭದ್ರತ ಸಿಬಂದಿ, ಸಿಸಿಟಿವಿ ವ್ಯವಸ್ಥೆ ಅಗತ್ಯವಾಗಿದೆ. ಸಿಸಿಟಿವಿ ಅಳವಡಿಕೆ ಮಾಡಿದಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಬಹುದು. ರಾತ್ರಿ ಅಕ್ರಮ ಚಟುವಟಿಕೆಗಳಿಗೆ ತಡೆಯಾಗುತ್ತದೆ. ಗಿಡಗಂಟಿಗಳು, ಹುಲ್ಲುಗಳ ತೆರವು ಮಾಡಿ ಪರಿಸರದ ಸ್ವತ್ಛತೆಗೆ ಗಮನ ಹರಿಸಬೇಕು. ಈ ಹಿಂದೆ ಪ್ರತ್ಯೇಕ ಸೈಕ್ಲಿಂಗ್‌ ಟ್ರ್ಯಾಕ್‌ ಪ್ರಸ್ತಾವನೆ ಇದ್ದು, ಯೋಜನೆ ಅನುಷ್ಠಾನವಾಗಬೇಕು.
-ಶಕಿನ್‌ ಶೆಟ್ಟಿ

Advertisement

ನಿರ್ವಹಣೆ ಇಲ್ಲದೆ ಸೊರಗಿದೆಮಣ್ಣಪಳ್ಳ ಸುಂದರ ಪರಿಸರವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಇಲ್ಲಿನ ಸಾರ್ವಜನಿಕ ಶೌಚಗೃಹ ಮಣ್ಣಪಳ್ಳಕ್ಕೆ ಬರುವ ಸಾರ್ವಜನಿಕರಿಗೆ ಬಳಕೆ ಮಾಡಲಾಗದ ಸ್ಥಿತಿಯಲ್ಲಿದ್ದು, ಕಾರ್ಮಿಕರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಈ ಪ್ರದೇಶಕ್ಕೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸಿ, ಸ್ವತ್ಛತೆಗೆ ಆದ್ಯತೆ ನೀಡಬೇಕು. ಸ್ಥಳೀಯ ಯುವಕರು, ಪ್ರಜ್ಞಾವಂತ ಹಿರಿಯ ನಾಗರಿಕರನ್ನು ಒಳಗೊಂಡ ಸ್ಥಳೀಯ ಮಟ್ಟದ ಸಮಿತಿ ರಚಿಸಬೇಕು.
-ರಾಜಾರಾಮ ಹೆಗ್ಡೆ

ಸ್ಥಳೀಯರ ಸಲಹೆ ಪರಿಗಣಿಸಿ
ಇಲ್ಲಿ ಆರಂಭದಲ್ಲಿ ಅಳವಡಿಸ ಲಾಗಿದ್ದ ಸೋಲಾರ್‌ ಬ್ಯಾಟರಿ ಕೆಟ್ಟುಹೋಗಿದೆ. ಸಂಜೆಯಾಗುತ್ತಿದ್ದಂತೆ ಇಡೀ ಪರಿಸರ ಕತ್ತಲಾಗುತ್ತದೆ. ಯಾವುದೇ ಲೈಟ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ವಾಕಿಂಗ್‌ ಟ್ರ್ಯಾಕ್‌ ಸುತ್ತ ಮುತ್ತ ಹುಲ್ಲು ಬೆಳೆ ದು ಕೊಂಡಿ ದೆ. ಮುಖ್ಯವಾಗಿ ಇಲ್ಲಿರುವ ಕ್ರೀಡಾಂಗಣಕ್ಕೆ ಯಾವುದೇ ಸೌಲಭ್ಯಗಳಿಲ್ಲ. ಸೆಕ್ಯೂರಿಟಿ ಸಿಬಂದಿ, ಸಿಸಿಟಿವಿ ಅಳವಡಿಕೆ ಅಗತ್ಯ. ಸೂಕ್ತ ನಿರ್ವಹಣೆಗೆ ಮತ್ತು ಸೌಕರ್ಯ ಕಲ್ಪಿಸುವ ಬಗ್ಗೆ ಸ್ಥಳೀಯರ ಸಲಹೆ ಪಡೆದು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
– ಭರತ್‌

ಮತ್ತೆ ತ್ಯಾಜ್ಯ ರಾಶಿ
ಮಣ್ಣಪಳ್ಳ ಅಭಿವೃದ್ಧಿ ಮತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಶೇಷ ಕಾಳಜಿ ವ್ಯಕ್ತವಾಗುತ್ತಿದ್ದರೆ ಇಲ್ಲಿ ಸಾಮಾಜಿಕ, ಪರಿಸರ ಕಾಳಜಿ ಮರೆತ ಕೆಲವರು ಮತ್ತೆ ಕಸದ ರಾಶಿ ತಂದು ಸುರಿದಿದ್ದಾರೆ. ಕ್ರೀಡಾಂಗಣ ಸಮೀಪದ ಕಸದ ತೊಟ್ಟಿ ಬಳಿ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ರಾಶಿಯನ್ನು ತಂದು ಸುರಿಯಲಾಗಿದೆ. ಇನ್ನೊಂದು ಕಡೆ ವಾಹನ ಪಾರ್ಕಿಂಗ್‌ ಪ್ರವೇಶ ದ್ವಾರ ಸಮೀಪದ ಗೇಟ್‌ ಶಿಥಿಲಾವಸ್ಥೆಯಲ್ಲಿದೆ. ಅದರೊಳಗೆ ಪ್ರವೇಶಿಸುವ ಜನರು ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ಪರಿಸರ ಸಂರಕ್ಷಣೆ ಬಗ್ಗೆ ಒಂದಿಷ್ಟು ಜಾಗೃತಿ ಇಲ್ಲದ ಕೆಲವು ಮಂದಿಯಿಂದ ಮಣ್ಣಪಳ್ಳಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೂಡಲೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕ್ರೀಡಾಂಗಣಕ್ಕೂ ಸೌಕರ್ಯವಿಲ್ಲ
ಮೈದಾನ ಮಾಡಿಕೊಟ್ಟಿ ದ್ದಾರೆ. ಆದರೆ ಯಾವುದೇ ಸೌಕರ್ಯವನ್ನು ಒದಗಿಸಿಲ್ಲ. ಸ್ಥಳೀಯ ಯುವಕರು ವಾಲಿಬಾಲ್‌, ಥ್ರೋಬಾಲ್‌, ಕ್ರಿಕೆಟ್‌ ಬೆಳಗ್ಗೆ ಮತ್ತು ಸಾಯಂಕಾಲ ಆಟವಾಡುತ್ತಾರೆ. ಒಂದಿಷ್ಟು ಹಣವನ್ನೂ ನಾವೇ ಸೇರಿಸಿ ವಾಲಿಬಾಲ್‌ ಕೋರ್ಟ್‌ ಸಹಿತ ಮೈದಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಮಣ್ಣಪಳ್ಳ ಪರಿಸರ ಮತ್ತು ಇಲ್ಲಿನ ಕ್ರೀಡಾ ಚಟುವಟಿಕೆಗಳಿಗೆ ಸೌಕರ್ಯ ಒದಗಿಸಲು ಈ ಹಿಂದೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಮತ್ತು ಗಾರ್ಡನ್‌ ನಿರ್ವಹಣೆ ಹೀಗೆ ಎರಡು ನೀರಿನ ಸಂಪರ್ಕವಿದ್ದು, ಎರಡರಲ್ಲಿಯೂ ನೀರು ಇಲ್ಲ. ಮೈದಾನ ಪಕ್ಕದ ಜಾಗದಲ್ಲಿ ಸಣ್ಣ ಮಕ್ಕಳಿಗೆ ಆಟವಾಡುವ ಪಾರ್ಕ್‌ ನಿರ್ಮಿಸಬೇಕು. ಜಿಲ್ಲಾಡಳಿತ ಅಥವಾ ನಗರಸಭೆ ಯಾವುದರ ಸುಪರ್ದಿಯಲ್ಲಿದ್ದರೂ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಲಹೆ, ಮಾರ್ಗದರ್ಶನ ನೀಡಲು ಸ್ಥಳೀಯಮಟ್ಟದ ಸಮಿತಿ
ರಚನೆ ಮಾಡಬೇಕು.
-ಜಯಕರ ಪೂಜಾರಿ, ಟ್ರಸ್ಟಿ, ಜೈ ಭಾರತ್‌ ನ್ಪೋರ್ಟ್ಸ್ ಚಾರಿಟೆಬಲ್‌ ಟ್ರಸ್ಟ್‌, ಮಣ್ಣಪಳ್ಳ

ಸೌಕರ್ಯ ಒದಗಿಸಿ
ಮಣ್ಣಪಳ್ಳ ಪರಿಸರ ಅತ್ಯಂತ ಸುಂದರ ವಿಹಾರ ಕೇಂದ್ರ, ಸಾಕಷ್ಟು ಮಂದಿ ಸಾರ್ವಜನಿಕರು ಇಲ್ಲಿನ ವಿಹಾರಕ್ಕೆ ಆಗಮಿಸುತ್ತಾರೆ. ಹುಲ್ಲು, ಗಿಡಗಂಟಿಗಳು ಸಾಕಷ್ಟು ಬೆಳೆದುಕೊಂಡಿವೆ. ಬೀದಿ ನಾಯಿ ಉಪಟಳವೂ ಹೆಚ್ಚಿದ್ದು ವಿಹಾ ರಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ನಿರಂತರ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ನಿಗಾ ಇರಿಸಿ ನಿಯಂ ಬೇಕು. ಇಲ್ಲಿ ಚಿಟ್ಟೆ ಪಾರ್ಕ್‌ ಸಹ ಮಾಡಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಗಿಡಗಳೆಲ್ಲ ಒಣಗಿವೆ. ಮಣ್ಣಪಳ್ಳ ಕೆಲವರ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪಕ್ಕದಲ್ಲಿ ಸ್ಥಳೀಯ ಯುವಕರು ಆಟವಾಡುವ ಕ್ರೀಡಾ ಮೈದಾನಕ್ಕೂ ಸೌಕರ್ಯವನ್ನು ಒದಗಿಸಬೇಕಿದೆ, ಅಲ್ಲದೆ ಉತ್ತಮ ಸೈಕ್ಲಿಂಗ್‌ ಟ್ರ್ಯಾಕ್‌ ನಿರ್ಮಿಸಬೇಕಾದ ಅಗತ್ಯವಿದೆ.
-ಅಮಿತ್‌ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next