Advertisement

ನಮ್ಮೂರು ನಮ್ಮ ಕೆರೆ ಯೋಜನೆ; ಎಸ್‌ಕೆಡಿಆರ್‌ಡಿಪಿಯಿಂದ ಕೆರೆ ಪುನಶ್ಚೇತನ

09:33 AM Jul 30, 2020 | mahesh |

ಬೆಳ್ತಂಗಡಿ: ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಅವರು ಶಾಶ್ವತ ಪರಿಹಾರವೆಂಬಂತೆ 2016ರಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆ ಪ್ರಾರಂಭಿಸಿದ್ದು, ಪ್ರಸ್ತುತ ಹತ್ತೂರಿನಲ್ಲಿ ಯಶಸ್ವಿಯಾಗಿದೆ.

Advertisement

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅವರ ಮಾರ್ಗ ದರ್ಶನದಲ್ಲಿ ಕರ್ನಾಟಕ ಸರಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೆರೆ ಸಂಜೀವಿನಿ ಯೋಜನೆಯ ಆರ್ಥಿಕ ನೆರವು ಪಡೆದು ಎಸ್‌ಕೆಡಿಆರ್‌ಡಿಪಿ ಮೂಲಕ ರಾಜ್ಯಾದ್ಯಂತ ಕೆರೆ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ.

4 ವರ್ಷಗಳಲ್ಲಿ 274 ಕೆರೆಗಳ ದುರಸ್ತಿ
ಎಸ್‌ಕೆಡಿಆರ್‌ಡಿಪಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತೀಯ ಜೈನ್‌ ಸಂಘಟನೆ ಜತೆಗೂಡಿಕೊಂಡು ಕಳೆದ ವರ್ಷದಿಂದೀಚೆಗೆ ಯಾದಗಿರಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಟ್ಟು 31 ಕೆರೆಗಳ ಹೂಳೆತ್ತಲಾಗಿದೆ. 8 ಕೆರೆಗಳಿಗೆ ನೀರು ಬರುವ ನಾಲೆಗಳ ಕಾಮಗಾರಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 30 ಕೆರೆಗಳ ಹೂಳೆತ್ತುವ ಗುರಿ ನಿಗದಿಪಡಿಸಲಾಗಿದೆ. 4 ವರ್ಷಗಳಿಂದ ಒಟ್ಟು 274 ಕೆರೆಗಳ ಪುನಶೇತನ ಕಾರ್ಯಕ್ರಮ ನಡೆದಿದ್ದು, ಈ ಮಳೆಗಾಲದಲ್ಲಿ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ ಎಂದು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೆರೆ ಸಂಜೀವಿನಿ ಯೋಜನೆಯ ಸಾಧನೆ
 ರಾಜ್ಯದಲ್ಲಿ ಮಂಜೂರಾದ ಕೆರೆಗಳು-74
 ಬಿಡುಗಡೆಯಾದ ಅನುದಾನ-4,58,380 ಕೋ.ರೂ.
 ಕಾಮಗಾರಿ ಪೂರ್ಣಗೊಂಡ ಕೆರೆ -53
 ತೆಗೆದ ಹೂಳಿನ ಪ್ರಮಾಣ-16,78,818.62 ಕ್ಯು.ಮೀ.
 ಸಾಗಿಸಿದ ಹೂಳಿನ ಮೌಲ್ಯ-3,35,760 ಕೋ.ರೂ.
 ಹೂಳು ತೆಗೆದುಕೊಂಡು ಹೋದ ರೈತರು-11,010
 ಕೆರೆ ನೀರು ಬಳಸುವ ಕುಟುಂಬಗಳು -23,850

ನಮ್ಮೂರು ನಮ್ಮ ಕೆರೆಯ ಸಾಧನೆ
 ರಾಜ್ಯದಲ್ಲಿ ಮಂಜೂರಾದ ಕೆರೆಗಳು- 219
 ಬಿಡುಗಡೆಯಾದ ಅನುದಾನ 14,83,570 ಕೋ.ರೂ.
 ಕಾಮಗಾರಿ ಪೂರ್ಣಗೊಂಡ ಕೆರೆಗಳು- 190
 ಹೂಳು ತೆಗೆದುಕೊಂಡು ಹೋದ ರೈತರು-41,800
 ತೆಗೆದ ಹೂಳಿನ ಪ್ರಮಾಣ- 40,41,100 ಕ್ಯು.ಮೀ.
 ಸಾಗಿಸಿದ ಹೂಳಿನ ಮೌಲ್ಯ- 8,08,220 ಕೋ.ರೂ.
 ಕೆರೆ ನೀರು ಬಳಸುವ ಕುಟುಂಬಗಳು – 85,500
 20-21ನೇ ಸಾಲಿನಲ್ಲಿ ಕೆರೆ ಪುನಶ್ಚೇತನ ಗುರಿ- 100

Advertisement
Advertisement

Udayavani is now on Telegram. Click here to join our channel and stay updated with the latest news.

Next