Advertisement

ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೊರ್ಗಲ್‌ಗ‌ುಡ್ಡೆ ಮಂಜುನಾಥ ಕಾಮತ್‌ ಆಯ್ಕೆ

10:23 PM Feb 19, 2021 | Team Udayavani |

ಅಜೆಕಾರು: ಆದಿಗ್ರಾಮೋತ್ಸವ ಸಮಿತಿ, ಆಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಲಯನ್ಸ್‌  ಕ್ಲಬ್‌ ಮುನಿಯಾಲು  ಇವುಗಳ ಸಹಯೋಗದೊಂದಿಗೆ ಹಿರ್ಗಾನ ಬಿ.ಎಂ.

Advertisement

ಶಾಲೆಯಲ್ಲಿ  ಫೆ.  28ರಂದು ನಡೆಯ ಲಿರುವ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೊರ್ಗಲ್‌ಗ‌ುಡ್ಡೆ ಮಂಜುನಾಥ ಕಾಮತ್‌ ಆಯ್ಕೆ ಯಾಗಿದ್ದಾರೆ.

ಸೃಜನಶೀಲ ಬರಹ ಮತ್ತು ಕೃತಿಗಳನ್ನು ಜನ ಸಾಮಾನ್ಯರಿಗೂ ಪರಿಚಯಿಸುವ ವಿಶಿಷ್ಟತೆ ಹೊಂದಿರುವ  ಇವರು “ಪಂಡಿತಾ’, “ದಾರಿ ತಪ್ಪಿಸು ದೇವರೇ’, “ನಾನು ಸನ್ಯಾಸಿಯಾಲು ಹೊರಟಿದ್ದೆª’ ಮತ್ತು “ಚಂದದ ಹಲ್ಲಿನ ಹುಡುಗಿ’  ಮತ್ತು “18 ಅವಳುಗಳ ಕಥೆ’ ಇವು ಅವರ ಕೃತಿಗಳಾಗಿವೆ. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ ಆಗಿದ್ದು,  ಕರ್ನಾಟಕ ಕೊಂಕಣಿ ಅಕಾಡೆಮಿಯ 1 ಲಕ್ಷ  ರೂ.ನ ಫೆಲೋಶಿಪ್‌ ಪಡೆದಿದ್ದಾರೆ.

ಯುವಕರೇ ವೇದಿಕೆ ಹಂಚಿಕೊಳ್ಳುವ ವಿನೂತನ ಕಲ್ಪನೆಯ ಸಮ್ಮೇಳನದಲ್ಲಿ ಮಧ್ಯಾಹ್ನ ಹಿರಿಯರಿಂದ ಕಿರಿಯರಿಗೆ ಮಾರ್ಗದರ್ಶನ ಮತ್ತು ಅವರ ಯಶಸ್ಸಿನ ಕಥೆ ಹೇಳುವ ಕಾರ್ಯಕ್ರಮ ಅನುಭವ ಗೋಷ್ಠಿ ಸಮ್ಮೇಳನದ ವಿಶೇಷತೆಯಾಗಿದೆ. ಕವಿಗೋಷ್ಠಿ, ಕನ್ನಡ ಗಾಯನ, ಭರತನಾಟ್ಯ, 6 ವರ್ಷ ಕೆಳಗಿನ ಮಕ್ಕಳ ಪುಟಾಣಿ ವಂಡರ್‌ ಶೋ, ರೂಪಾ ವಸುಂಧರಾ ಆಚಾರ್ಯ ಅವರ  ಪುಷ್ಪಾಂಜಲಿ ಕಲಾ ಪ್ರದರ್ಶನವಿದೆ.

ಭಾರತ ಸಾಧನಾ ಗೌರವ :

Advertisement

ಕಾರ್ಯಕ್ರಮದಲ್ಲಿ ಸಾಧಕರಿಗೆ ಭಾರತ ಸಾಧನಾ ಗೌರವ  ನೀಡಲಾಗುತ್ತಿದ್ದು ವಿವಿಧ ಕ್ಷೇತ್ರಗಳ ಸಾಧಕರಾದ ಕೆ. ಜಯಪ್ರಕಾಶ ಹೆಗ್ಡೆ, ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ; ಕೆ.ಅಭಯಚಂದ್ರ ಜೈನ್‌ ಮೂಡುಬಿದಿರೆ, ಮಾಜಿ ಸಚಿವರು;  ದೇವಸ್ಯ ಶಿವರಾಮ ಶೆಟ್ಟಿ, ಮುಂಬಯಿ ಉದ್ಯಮಿ;  ಗುಣಪಾಲ ಕಡಂಬ, ಆಧುನಿಕ ಕಂಬಳಗಳ ರೂವಾರಿ;  ಹರಿಪ್ರಸಾದ್‌ ರೈ ಬೆಳ್ಳಿಪಾಡಿ ಮಣಿಪಾಲ ಉದ್ಯಮಿ;  ರಾಮಚಂದರ್‌ ಬೈಕಂಪಾಡಿ, ಸಾಹಿತಿ, ಮಂಗಳೂರು;  ಶೀಲಾ ಕೆ.  ಶೆಟ್ಟಿ, ಉಡುಪಿ, ರಾಜಕಾರಣಿ;  ಆರೂರು ತಿಮ್ಮಪ್ಪ ಶೆಟ್ಟಿ, ದೈಹಿಕ ಶಿಕ್ಷಕರು;  ಶಿರಿಯಣ್ಣ ಶೆಟ್ಟಿ, ಹಿರಿಯ ಸಹಕಾರ ಧುರೀಣ; ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಕಂಬಳ ಕ್ಷೇತ್ರದ ಸಾಧಕರು;   ಕೆ.ಪಿ. ಪದ್ಮಾವತಿ, ಸಣ್ಣ ಉಳಿತಾಯ ಮತ್ತು ಮಹಿಳಾ ಸಾಧಕಿ;  ಅಶೋಕ್‌ ಕುಮಾರ್‌ ಕಾಸರಗೋಡು,  ಸಾಹಿತಿ;  ರಾಜವರ್ಮ ಬೈಲಂಗಡಿ, ಹಿರಿಯ ಪ್ರಗತಿಪರ ಕೃಷಿಕರು;  ಬೋಳ ಪ್ರಭಾಕರ ಕಾಮತ್‌,  ಹಿರಿಯ ಉದ್ಯಮಿಗಳು;  ಐ.ವಿ. ಸೋನ್ಸ್‌, ಬನ್ನಡ್ಕ ಮೂಡುಬಿದಿರೆ, ಕೃಷಿ ಸಾಧಕರು;   ಮಿತ್ರಪ್ರಭ ಹೆಗ್ಡೆ, ಕಾರ್ಕಳ, ನಿವೃತ್ತ ಪ್ರಾಂಶುಪಾಲರು;  ಕೆ. ಮಹಾಬಲೇಶ್ವರ ಆಚಾರ್ಯ, ಉಡುಪಿ, ಸಮಾಜ ಸೇವಕರು;  ಪ.ರಾಮಕೃಷ್ಣ ಶಾಸ್ತ್ರಿ,  ಬೆಳ್ತಂಗಡಿ, ಹಿರಿಯ ಸಾಹಿತಿಗಳು; ಭಾಸ್ಕರ ಜೋಯಿಸ್‌ ಹೆಬ್ರಿ, ಉದ್ಯಮಿ; ಯೋಗೀಶ್‌ ಭಟ್‌ ಹೆಬ್ರಿ, ಜವಳಿ ವರ್ತಕರ ಸಂಘದ ಉಭಯ ಜಿಲ್ಲಾಧ್ಯಕ್ಷರು;   ಭುವನ ಪ್ರಸಾದ್‌ ಹೆಗ್ಡೆ ಮಣಿಪಾಲ, ಸಂಘಟಕರು;  ಉದ್ಯಾವರ ನಾಗೇಶ್‌ ಕುಮಾರ್‌, ರಂಗಕರ್ಮಿ;  ಕೆ. ಪದ್ಮಾಕರ ಭಟ್‌, ಹಿರಿಯ ಪತ್ರಕರ್ತರು;  ನಿತ್ಯಾನಂದ ಪೈ,  ಕಾರ್ಕಳ, ಸಿನೆಮಾ ನಿರ್ಮಾಪಕರು;  ಎ. ನರಸಿಂಹ ಬೊಮ್ಮರಬೆಟ್ಟು, ಶಿಕ್ಷಣ ತಜ್ಞರು;  ಕೆ. ಕರುಣಾಚಂದ್ರ, ನಿವೃತ್ತ ಜಿಲ್ಲಾ ಯುವಜನ ಅಧಿಕಾರಿ;  ನರಸಿಂಹ ಮೂರ್ತಿ ರಾವ್‌, ಉಡುಪಿ, ಸಾಹಿತ್ಯ ಪರಿಚಾರಿಕೆ;  ನಾರಾಯಣ ಶೆಟ್ಟಿ ಮುಂಬಯಿ, ಮುದ್ರಣ ಕ್ಷೇತ್ರ; ಸದಾನಂದ ನಾಯಕ್‌ ಮುಂಬಯಿ, ಯಕ್ಷಗಾನ ಕಲಾವಿದರನ್ನು ಗೌರವಿಸಲಾಗುತ್ತದೆ ಎಂದು ಪ್ರಧಾನ ಸಂಘಟಕ ಡಾ|  ಶೇಖರ ಅಜೆಕಾರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next