ಬೀದರ: ಕಾರಂಜಾ ಜಲಾಶಯದ ನೀರು ಮಾಂಜ್ರಾ ನದಿಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ
ಘಟಕದಿಂದ ಜನವಾಡ ಗ್ರಾಮದಿಂದ ಬೀದರ್ ನಗರದ ವರೆಗೆ ಪಾದಯಾತ್ರೆ ನಡೆಸಲಾಯಿತು.
ಬೇಸಿಗೆ ಕಾವು ಹೆಚ್ಚಾಗಿದ್ದು, ಔರಾದ ಮತ್ತು ಬೀದರ್ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರಾಣಿ ಪಕ್ಷಿಗಳು ನೀರಿಗಾಗಿ ಹೈರಾಣ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾಂಜ್ರಾ ನದಿಗೆ ಕಾರಂಜಾ ಜಲಾಶಯದ ನೀರು ಹರಿಸಿದರೆ ಎರಡೂ ತಾಲೂಕಿನ ಜನರ ನೀರಿನ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ. ಸರ್ಕಾರ ಕೂಡಲೆ ಜಲಾಶಯದ ನೀರು ಹರಿಸಲು ಮುಂದಾಗಬೇಕು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಧರಣಿ, ಸತ್ಯಾಗ್ರಹ ನಡೆಸುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಸೋಮನಾಥ ಮುಧೋಳ, ಸುಭಾಷ ಕೆನಡೆ, ನಾಗಪ್ಪ ಜಾನಕನೂರ್, ಗೋಪಾಲ್ ಕುಲಕರ್ಣಿ, ಲೋಕೇಶ ಬಿರಾದಾರ, ದತ್ತು ಅಲ್ಲಮಕೇರೆ, ಖಂಡಪ್ಪಾ ಪಾತರಪಳ್ಳಿ, ಮಲ್ಲಿಕಾರ್ಜುನ ಸಿಕೇನಪುರೆ, ಮಳಸಾಕಾಂತ ವಾಘೆ, ಶಿವರುದ್ರ ತೀರ್ಥ, ಸಂಗಮೇಶ ಗುಮ್ಮೆ, ರಮೇಶ ಬಿರಾದರ, ಸಂತೋಷ ಚೆಟ್ಟಿ, ಉದಯಕುಮಾರ ಅಷ್ಟೂರೆ, ಸಿದ್ದು ಜಮಾದಾರ ಇದ್ದರು.