ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕ್‌ನ ಕುಂಜತ್ತೂರು ಶಾಖೆಯಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಒಟ್ಟು 7,94,100 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್‌ನ ಅಪ್ರೈಸರ್ ಸಹಿತ 8 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬ್ಯಾಂಕ್‌ನ ಅಪ್ರೈಸರ್ ಕುಂಜತ್ತೂರು ನಿವಾಸಿ ರವೀಂದ್ರ ಕೆ.ಎಸ್. (65), ಗ್ರಾಹಕರಾದ ಕುಂಜತ್ತೂರು ನಿವಾಸಿ ನೌಶಾದ್ (35), ಕುಂಜತ್ತೂರಿನ ಮೊಹಮ್ಮದ್ ಅಸ್ಮಲ್ (32), ಕುಂಜತ್ತೂರಿನ ಸೈಯದ್ ಸಮದ್ ತಂಙಳ್, ಕುಂಜತ್ತೂರಿನ ಯೋಗೀಶ್, ಉದ್ಯಾವರ ರಹ್ಮತ್ ಮಂಜಿಲ್‌ನ ಶರೀಫ್, ಉದ್ಯಾವರ ಖದೀಜತ್ ಕುಬ್ರ, ತೂಮಿನಾಡಿನ ವಸಂತಿ ವಿರುದ್ಧ ಕೇಸು ದಾಖಲಿಸಲಾಗಿದೆ.
ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಪ್ರಜೀಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.