Advertisement
ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ತಾಯಿ ಮೈಮೂನಾ ಅವರಿಗೆ ಕರೆ ಮಾಡಿದ ಹಾರೀಸ್ ತಾನು ಬಿಡುಗಡೆಯಾಗಿದ್ದು ಮಂಗಳೂರು ಪಂಪ್‌ವೆಲ್ ಜಂಕ್ಷನ್‌ನಲ್ಲಿ ಇರುವುದಾಗಿ ತಿಳಿಸಿದ. ತತ್‌ಕ್ಷಣ ಮನೆಯವರು ಮಂಜೇಶ್ವರ ಪೊಲೀಸರ ಜತೆಗೂಡಿ ಮಂಗಳೂರಿಗೆ ತೆರಳಿ ಆತನನ್ನು ಕರೆತಂದರು.
ಜುಲೈ 24ರಂದು ಅಪಹರಿಸಿ 48 ಗಂಟೆ ಕಳೆದರೂ ಪತ್ತೆಹಚ್ಚಲು ಅಥವಾ ಬಿಡುಗಡೆಗೊಳಿಸಲು ಸಾಧ್ಯವಾಗ ದ್ದರಿಂದ ಸಾರ್ವಜನಿಕರು ಗುರುವಾರ ಬೆಳಗ್ಗೆ ಮಂಜೇಶ್ವರ ಠಾಣೆಗೆ ಜಾಥಾ ನಡೆಸಲು ಸ್ಥಳೀಯರು ನಿರ್ಧರಿಸಿದ್ದರು. ಇದರಿಂದ ತೀವ್ರ ಒತ್ತಡಕ್ಕೀ ಡಾದ ಪೊಲೀಸರು ತನಿಖೆ ಯನ್ನು ಕ್ರೈಂಬ್ರಾಂಚ್‌ಗೆ
ಹಸ್ತಾಂತರಿಸಿದರು. ತನಿಖೆ ತೀವ್ರಗೊಂಡಾಗ ಚಿನ್ನ ಸಾಗಾಟಕ್ಕೆ ವಿವಾದಕ್ಕೆ ಸಂಬಂಧಿಸಿ ಕೊಲ್ಲಿ ಯಲ್ಲಿ ಮಧ್ಯಸ್ಥಿಕೆ ಚರ್ಚೆ ನಡೆದಿದ್ದು, ಅಪಹಾರಕರು 3 ಕೋಟಿ ರೂ. ಬೇಡಿಕೆ ಮುಂದಿಟ್ಟರು. ಕೊನೆಗೆ ಜು. 24ರಂದು ರಾತ್ರಿ 12 ಗಂಟೆಗೆ ಹಾರೀಸ್‌ನ ಮಾವ ಲತೀಫ್ ಊರಿಗೆ ಕರೆ ಮಾಡಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ; ಹುಡುಗ ಶೀಘ್ರ ಬಿಡುಗಡೆಯಾಗಲಿದ್ದಾನೆ ಎಂದು ತಿಳಿಸಿದರು. ಗುರುವಾರ ಮುಂಜಾನೆ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ.
ಅಪಹಾರಕರು ತನ್ನಲ್ಲಿ ಅನುಚಿತವಾಗಿ ವರ್ತಿಸಿಲ್ಲ ಎಂದು ಹಾರೀಸ್ ತಿಳಿಸಿದ್ದಾನೆ.
Related Articles
ಜು. 22ರಂದು ಹಾರೀಸ್ ಹಾಗೂ ಸಹೋದರಿ ಸ್ಕೂಟರ್‌ನಲ್ಲಿ ತೊಕ್ಕೊಟ್ಟಿನ ಕಾಲೇಜಿಗೆ ತೆರಳುತ್ತಿದ್ದಾಗ ಮನೆಯಿಂದ 1 ಕಿ.ಮೀ. ದೂರದಲ್ಲಿ ಕಪ್ಪು ಬಣ್ಣದ ಕಾರೊಂದು ಹಿಂಬಾಲಿಸಿ ಬಂದು ಅಡ್ಡಗಟ್ಟಿತು. ನಾಲ್ವರು ವ್ಯಕ್ತಿಗಳೆ ಹಾರೀಸ್‌ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಪರಾರಿಯಾದರು. ಭಯದಿಂದ ಓಡಿದ ಸಹೋದರಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ವ್ಯಾಪಕ ಶೋಧ ನಡೆಸಿದರೂ ಪತ್ತೆ ಸಾಧ್ಯವಾಗಲಿಲ್ಲ.
Advertisement
ಈ ಮಧ್ಯೆ ಕೊಲ್ಲಿಯಿಂದ ಹಾರೀಸ್‌ನ ಮನೆಯವರ ಮೊಬೈಲ್‌ಗೆ ಧ್ವನಿ ಸಂದೇಶವೊಂದು ಬಂದಿದ್ದು, 3 ಕೋ.ರೂ. ನೀಡದಿ ದ್ದಲ್ಲಿ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಲಾಗಿತ್ತು. ಜತೆಯಲ್ಲೇ ಹಾರೀಸ್‌ನ ಧ್ವನಿ ಸಂದೇಶವೂ ಬಂದಿದ್ದು ಹಣ ನೀಡದಿದ್ದಲ್ಲಿ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದ. ಕೊಲ್ಲಿಯಲ್ಲಿರುವ ವ್ಯಕ್ತಿಗಳು ಹಾರೀಸ್‌ನ ಸೋದರ ಮಾವ ಲತೀಫ್ ಮೂಲಕ ಮಂಗಳೂರಿಗೆ ಕಳುಹಿಸಿದ 4 ಕಿಲೋ ಚಿನ್ನವನ್ನು ಆತ ಅದರ ಮಾಲಕನಿಗೆ ನೀಡದಿರುವುದೇ ಅಪಹರಣ ಹಿಂದಿರುವ ಕಾರಣ ಎಂಬ ವಿಚಾರ ಆಗಷ್ಟೇ ಮನೆ ಯವರ ಅರಿವಿಗೆ ಬಂದಿತು. ಚಿನ್ನವನ್ನು ಕಸ್ಟಂಸ್ ವಶಪಡಿಸಿಕೊಂಡಿರುವ ಕಾರಣ ಅದನ್ನು ಸಂಬಂಧಪಟ್ಟವರಿಗೆ ಕೊಡಲಾಗಿಲ್ಲ ಎಂದು ಲತೀಫ್ ಕಾರಣ ನೀಡಿ ದ್ದರು. ಪ್ರಸ್ತುತ ಲತೀಫ್ ಕತಾರ್‌ನಲ್ಲಿರು ವುದರಿಂದ ಪೊಲೀಸರಿಗೆ ಆತನ ವಿಚಾರಣೆ ಸಾಧ್ಯವಾಗಿಲ್ಲ. ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡಲು ಮಂಜೇಶ್ವರ ಪೊಲೀಸರು ನಿರಾಕರಿಸಿದ್ದಾರೆ.