Advertisement
ಬುಧವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಈ ದುರಂತ ಸಂಭವಿಸಿದ್ದು, ಮಂಜೇಶ್ವರ ಪೊಸೋಟು ಸತ್ಯಡ್ಕ ಆದರ್ಶ ನಗರದ ಕೆ.ಟಿ. ಅಬೂಬಕ್ಕರ್ ಹಾಜಿ ಅವರ ಪುತ್ರಿಯರಾದ ಆಮೀನಾ (45), ಆಯಿಷಾ (42) ಮತ್ತು ಆಯಿಷಾ ಅವರ ಪುತ್ರ ತಾಮಿಲ್ (3) ಮೃತಪಟ್ಟವರು.
Related Articles
Advertisement
ಆಮೀನಾಳ ಪತಿ ಮೊದಿನ್ ಮಂಗಳೂರಿನ ಹೊಟೇಲಿನಲ್ಲಿ ವೃತ್ತಿ ಯಲ್ಲಿದ್ದು ಐವರು ಮಕ್ಕಳು. ಆಯಿಷಾ ಪತಿ ಅಬ್ದುಲ್ಲ ಕೊಲ್ಲಿ ರಾಷ್ಟ್ರದಲ್ಲಿದ್ದು ಅವರಿಗೂ ಐವರು ಮಕ್ಕಳು. ಈ ಪೈಕಿ ತಾಮಿಲ್ ಅಮ್ಮ ನೊಂದಿಗೆ ಮೃತಪಟ್ಟಿದೆ.
ಮೇಲ್ಸೇತುವೆ ಇಲ್ಲದಿರುವುದೇ ಕಾರಣಘಟನಾ ಸ್ಥಳ ಅಪಘಾತಗಳ ಆಗರವಾಗಿದ್ದು, ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ನೀಡಿ ದರೂ ಯಾವುದೇ ಫಲಶ್ರುತಿ ಕಂಡಿರಲಿಲ್ಲ. ಹೆದ್ದಾರಿಯಿಂದ ಒಳಪೇಟೆಗೆ ತೆರಳಬೇಕಾದರೆ ರೈಲು ಹಳಿಯನ್ನು ದಾಟಿಯೇ ಸಾಗಬೇಕಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಈ ಅಪಾಯಕಾರಿ ಹಾದಿಯನ್ನೇ ಬಳಸುತ್ತಿದ್ದಾರೆ. ರೈಲು ಪ್ರಯಾ ಣಿಕರಿಗೆ ರೈಲು ನಿಲ್ದಾಣವನ್ನು ದಾಟಲು ಮೇಲ್ಸೇತುವೆ ಇದೆ. ಒಳಪೇಟೆಯಿಂದ ಬರುವ ರಸ್ತೆಯಿಂದ ಸುಮಾರು 250 ಮೀಟರ್ ದೂರದಲ್ಲಿ ಈ ಮೇಲ್ಸೇತುವೆ ಇದ್ದು, ದಾರಿಹೋಕರು ಅದರ ಮೇಲಿನಿಂದ ದಾಟಿ ಹೆದ್ದಾರಿಯಲ್ಲಿರುವ ಬಸ್‌ನಿಲ್ದಾಣ ತಲುಪುವಾಗ ಒಂದು ಕಿ.ಮೀ. ಆಗುತ್ತದೆ. ಆದ್ದರಿಂದ ದಾರಿಹೋಕರು ಅಪಾಯಕಾರಿಯಾದರೂ ರೈಲು ಹಳಿಯನ್ನು ದಾಟಿಯೇ ಹೋಗುತ್ತಾರೆ. ರೈಲಿನ ಅಡಿಯಿಂದಲೂ ನುಸುಳುತ್ತಾರೆ!
ಇದೇ ಸ್ಥಳದಲ್ಲಿ ಕೆಲವೊಮ್ಮೆ ಗೂಡ್ಸ್ ರೈಲು ಗಾಡಿಯನ್ನು ವಾರಗಟ್ಟಲೇ ನಿಲ್ಲಿಸಲಾಗುತ್ತಿದ್ದು, ಅದರ ಅಡಿಯಿಂದಲೇ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನುಸುಳಿಕೊಂಡು ಸಾಗುತ್ತಾರೆ. ಇಲ್ಲಿ ಅವಘಡಗಳಿಂದ ಮುಕ್ತಿ ಹೊಂದಲು ಮೇಲ್ಸೇತುವೆ ನಿರ್ಮಾಣ ಅತೀ ಅಗತ್ಯವಾಗಿದೆ. ಸಂಸದರು, ಜಿ.ಪಂ. ಅಧ್ಯಕ್ಷರು, ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.