Advertisement

ಸಿಬಿಐ ಮುಂದೆ ಹಾಜರಾಗುವ ಮುನ್ನ ಸಿಸೋಡಿಯಾ ರೋಡ್ ಶೋ: ಬಿಜೆಪಿ ಆಕ್ರೋಶ

03:55 PM Feb 26, 2023 | Team Udayavani |

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಮುಂದೆ ಹಾಜರಾಗುವ ಗಂಟೆಗಳ ಮೊದಲು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ರೋಡ್ ಶೋ , ಭಾಷಣ ಮಾಡಿದ್ದಕ್ಕಾಗಿ ಬಿಜೆಪಿ ಕಿಡಿ ಕಾರಿದೆ.

Advertisement

ಸಿಸೋಡಿಯಾ ಅವರು ಇಂದು ಬೆಳಗ್ಗೆ 10 ಗಂಟೆಗೆ ತಮ್ಮ ಮನೆಯಿಂದ ಹೊರಟಾಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು. ಭಿತ್ತಿಪತ್ರಗಳು ಮತ್ತು ಘೋಷಣೆಗಳ ನಡುವೆ, ಅವರು ತಮ್ಮ ಕಾರಿನ ಸನ್‌ರೂಫ್ ಮೇಲೆ ನಿಂತು ತಮ್ಮ ಬೆಂಬಲಿಗರತ್ತ ಕೈ ಬೀಸಿದರು. ಸಿಸೋಡಿಯಾ ಅವರು ಭಾಷಣ ಮಾಡುವ ಮೊದಲು ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿದರು.

ಸಿಬಿಐ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಸಂಸದ ಸಂಜಯ್ ಸಿಂಗ್ ಮತ್ತು ಇತರ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು 50ಕ್ಕೂ ಹೆಚ್ಚು ಎಎಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಪ್ರದೇಶದಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ವಿಧಿಸಲಾಗಿರುವುದರಿಂದ ಸ್ಥಳವನ್ನು ಖಾಲಿ ಮಾಡುವಂತೆ ಮನವಿ ಮಾಡಲಾಗಿತ್ತು ಆದರೆ ಅವರು ಕುಳಿತು ಘೋಷಣೆಗಳನ್ನು ಕೂಗಿದರು. ಎಎಪಿ ಸಂಸದ ಸಂಜಯ್ ಸಿಂಗ್, ದೆಹಲಿ ಸಚಿವ ಗೋಪಾಲ್ ರಾಯ್ ಸೇರಿದಂತೆ ಒಟ್ಟು 50 ಜನರನ್ನು (42 ಪುರುಷರು ಮತ್ತು 8 ಮಹಿಳೆಯರು) ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮನೀಶ್ ಸಿಸೋಡಿಯಾ, ಇದು ಸವಾಲಿನ ಸಮಯ ಎಂದು ಹೇಳಿದರು ಮತ್ತು ಜೈಲಿಗೆ ಹೋಗುವ ಭಯವಿಲ್ಲ ಎಂದು ಪುನರುಚ್ಚರಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್ ಅವರ ಸರ್ಫರೋಷಿ ಕಿ ತಮನ್ನಾ ಎಂಬ ಅಮರ ಸಾಲುಗಳನ್ನು ಪಠಿಸಿ, ನಾನು ಯಾವಾಗಲೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನಿರಂತರ ಬೆಂಬಲಕ್ಕಾಗಿ ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದರು.

Advertisement

ಜೈಲಿಗೆ ಹೋಗುವುದು ಸಣ್ಣ ವಿಷಯ

”ಇಂದು ಮತ್ತೆ ಸಿಬಿಐ ವಿಚಾರಣೆಗೆ ಹೋಗಲಿದ್ದು, ಸಂಪೂರ್ಣ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಲಕ್ಷಾಂತರ ಮಕ್ಕಳ ಪ್ರೀತಿ ಮತ್ತು ಕೋಟ್ಯಂತರ ದೇಶವಾಸಿಗಳ ಆಶೀರ್ವಾದ ನಮ್ಮೊಂದಿಗಿದೆ.ಒಂದಿಷ್ಟು ತಿಂಗಳು ಜೈಲಿನಲ್ಲಿ ಇರಬೇಕಾದರೂ ನನಗಿಷ್ಟ. ನಾನು ಭಗತ್ ಸಿಂಗ್ ನ ಅನುಯಾಯಿ, ದೇಶಕ್ಕಾಗಿ ಭಗತ್ ಸಿಂಗ್ ಗಲ್ಲಿಗೇರಿದ. ಇಂತಹ ಸುಳ್ಳು ಆರೋಪಗಳಿಂದ ಜೈಲಿಗೆ ಹೋಗುವುದು ಸಣ್ಣ ವಿಷಯ” ಎಂದು ಸಿಸೋಡಿಯಾ ಹೇಳಿದ್ದಾರೆ.

ಈವೆಂಟ್ ಮ್ಯಾನೇಜ್‌ಮೆಂಟ್

”ಭ್ರಷ್ಟಾಚಾರವನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಆಗಿ ಪರಿವರ್ತಿಸುವುದರಿಂದ ಭ್ರಷ್ಟಾಚಾರವನ್ನು ಮರೆಮಾಡಲು ಸಹಾಯ ಮಾಡುವುದಿಲ್ಲ. ಮದ್ಯ ನೀತಿ ಹಗರಣದ ಬಗ್ಗೆ ಎಎಪಿ ಯಾವುದೇ ಉತ್ತರ ನೀಡಿಲ್ಲ. ಅವರು ಸತ್ಯವನ್ನು ಮರೆಮಾಚುವಲ್ಲಿ ನಿರತರಾಗಿದ್ದಾರೆ ಎಂಬುದು ಒಂದು ವಿಷಯ ಸ್ಪಷ್ಟವಾಗಿದೆ. ಅವರು ಸಿಬಿಐಗೆ ಉತ್ತರ ನೀಡಬೇಕು, ಈವೆಂಟ್ ಮ್ಯಾನೇಜ್‌ಮೆಂಟ್ ಅಗತ್ಯವಿಲ್ಲ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next