Advertisement

Manipal ಮಾದಕ ದ್ರವ್ಯ ಸಹಿತ ಇಬ್ಬರು ಕಾನೂನು ವಿದ್ಯಾರ್ಥಿಗಳ ಬಂಧನ

08:33 PM Jun 16, 2023 | Team Udayavani |

ಉಡುಪಿ: ಜಿಲ್ಲಾ ಎಸ್‌.ಪಿ ಅಕ್ಷಯ್ ಮಚಿಂದ್ರ ಹಾಕೆ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪಿಐ ದೇವರಾಜ್ ಟಿ.ವಿ ನೇತೃತ್ವದ ವಿಶೇಷ ತಂಡ ಡ್ರಗ್ಸ್‌ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು ಜೂನ್ 16 ರಂದು ಮಣಿಪಾಲ ಠಾಣಾ ವ್ಯಾಪ್ತಿಯ ಹೆರ್ಗ ಗ್ರಾಮದ ಈಶ್ವರ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ದ್ರವ್ಯ ಮೆಥಾಂಪೆಟಮೆನ್‌ ನನ್ನು ಮಾರಾಟ ಮಾಡುವ ಪ್ರಯತ್ನದಲ್ಲಿದ್ದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತರು ಕೇರಳ ಮೂಲದ ನಿಭೀಷ್ (23) ಮತ್ತು ಅಮಲ್‌(22) ಎನ್ನುವವರಾಗಿದ್ದು,ಇಬ್ಬರೂ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ಅಪ್ಸಿನ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.

ಬಂಧಿತ ವಿದ್ಯಾರ್ಥಿಗಳ ಬಳಿ 35 ಸಾವಿರ ರೂ. ಮೌಲ್ಯದ 7.3 ಗ್ರಾಂ ಮೆಥಾಂಪೆಟಮೆನ್‌ (MDMA) ಮಾದಕ ದ್ರವ್ಯ ಪತ್ತೆಯಾಗಿದ್ದು, ಜತೆಗೆ 1.25 ಲಕ್ಷ ಮೌಲ್ಯದ ಡ್ಯೂಕ್‌ ಬೈಕ್‌ ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್‌ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಮಣಿಪಾಲದಲ್ಲಿ ಬುಧವಾರ ವಿದ್ಯಾರ್ಥಿ ಸೇರಿದಂತೆ ಮೂರು ಜನ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಸುಮಾರು 75,000 ರೂ.ಮೌಲ್ಯದ 1.5 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next