Advertisement

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

08:47 PM Nov 04, 2024 | Team Udayavani |

ಮಣಿಪಾಲ: ಸಾಲದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಮಣಿಪಾಲದ ಶ್ರುತಿ ಆತ್ಮಹತ್ಯೆ ಮಾಡಿಕೊಂಡವರು. 5 ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿದ್ದು, ಅನಂತರ ಅನಂತನಗರದ ಮಂಚಿಕುಮೇರಿಯಲ್ಲಿ ವಾಸಮಾಡಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಗಂಡನ ಕಾಯಿಲೆಗೆ ಸಾಲ ಮಾಡಿಕೊಂಡು ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿದ್ದರು.

ಸಾಲ ಮಾಡಿಕೊಂಡ ಚಿಂತೆ ಹಾಗೂ ಚಿನ್ನವನ್ನು ಬಿಡಿಸಲು ಆಗಲಿಲ್ಲ ಎಂಬ ಚಿಂತೆಯಿಂದ ಮನನೊಂದು ಶ್ರುತಿ ಅವರು ನ.3ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next