ಮಣಿಪಾಲ: ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಗಳ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.
Advertisement
ಮೂಡುಅಲೆವೂರಿನ ನೆಹರೂ ನಗರದ ನಿವಾಸಿ ದಿವಾಕರ ಪೂಜಾರಿ ಅವರ ಮನೆಗೆ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಂನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂನ ಕಿವಿಯೋಲೆ ಮತ್ತು ಸರ, 20 ಗ್ರಾಂನ ಪೆಂಡೆಂಟ್ ಇರುವ ಚಿನ್ನದ ಸರ, 4 ಗ್ರಾಂನ ಚಿನ್ನದ ಉಂಗುರ, 8 ಗ್ರಾಂನ ಚಿನ್ನದ ಸರ, 2 ಗ್ರಾಂನ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000 ರೂ. ಆಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.