Advertisement
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ತರಬೇತಿಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 50 ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಆರಂಭವಾಗಿದ್ದು, ಫೆ. 28ರಂದು ಜಿಲ್ಲೆಯ ವಿವಿಧೆಡೆಗಳ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಲಿದೆ. ಸಿ.ವಿ. ರಾಮನ್ ಅವರ ಭಾವಚಿತ್ರವಿರುವ ಫಲಕವನ್ನು ಅನಾವರಣಗೊಳಿಸಿ ಪ್ರದರ್ಶನವನ್ನು ಉದ್ಘಾಟಿಸಲಾಯಿತು.
ಪ್ರಸ್ತುತ ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕರೋನ ವೈರಸ್ ತುತ್ತಾದ ವ್ಯಕ್ತಿಯಲ್ಲಿ ಕಾಣಿಸಿವ ಲಕ್ಷಣ ಹಾಗೂ ಮುಂಜಾಗೃತ ಕ್ರಮಗಳ ಕುರಿತು ಮಾದರಿಗಳು ನೋಡುಗರ ಗಮನ ಸೆಳೆಯಿತು. ಸೂಕ್ಷ್ಮಾಣು ಜೀವಿಗಳು, ಅವುಗಳಿಂದ ಉಂಟಾಗುವ ಕಾಯಿಲೆ, ಕಿಣ್ವಗಳು, ಪ್ಲಾಸ್ಮಾ, ಆಮ್ಲಜನಕ ಉತ್ಪಾದನೆ, ಸೈಕ್ಲೋಸಿಸ್, ಮಿದುಳು, ಹೈಡ್ರಾಲಿಕ್ಸ್, ಜೆನೆಟಿಕ್ಸ್, ಭೌತ ಮತ್ತು ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು ಪ್ರದರ್ಶನದಲ್ಲಿದ್ದವು. ತರಬೇತಿ ಕಾರ್ಯಾಗಾರ ವಿಜ್ಞಾನ ದಿನದ ಅಂಗವಾಗಿ ಸಂಸ್ಥೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 5 ದಿನಗಳ ವಿಜ್ಞಾನ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಅವರಿಗೆ ವಿಜ್ಞಾನದ ಕೌತುಕ, ಲ್ಯಾಬೋರೇಟರಿ ಸಂಶೋಧನೆ, ಜೆನೆಟಿಕ್ಸ್ ಇತ್ಯಾದಿಗಳ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಯಿತು. ಚೀನ ಮಾದರಿ ಅಂತಸ್ತು ಕೃಷಿ
ನೀರಿನ ಮಿತವ್ಯಯದೊಂದಿಗೆ ವಿಶಿಷ್ಟ ಕ್ರಮದಲ್ಲಿ ಮಾಡಲಾಗುವ ಚೀನ ಮಾದರಿಯ ಅಂತಸ್ತು ಕೃಷಿಯ ಮಾದರಿ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೀಯವಾಗಿತ್ತು. ಬಾಟಲ್‌ಗಳನ್ನು ಉಪಯೋಗಿಸಿ ಇಲ್ಲಿ ಅಂತಸ್ತು ಕೃಷಿಯನ್ನು ಬಿಂಬಿಸಲಾಗಿದ್ದು, ಮೇಲೆ ಹಾಕಿದ ನೀರನ್ನು ಗಿಡಗಳು ಬೇಕಾದಷ್ಟು ಬಳಸಿ ಕೆಳ ಅಂತಸ್ತಿನ ಗಿಡಗಳಿಗೆ ಬಿಟ್ಟುಕೊಡುವ ರೀತಿ ಇದರಲ್ಲಿ ತತ್ವವನ್ನು ಬಿತ್ತರಿಸಲಾಗಿತ್ತು.