Advertisement

ಮಣಿಪಾಲ ಎಸ್‌ಒಸಿ:”ನಮ್ಮ ಅಂಗಡಿ-2019′ಉದ್ಘಾಟನೆ

12:30 AM Mar 09, 2019 | |

ಉಡುಪಿ: ಮಣಿಪಾಲ ಮಾಹೆಯ ಸ್ಕೂಲ್‌ ಆಫ್ ಕಮ್ಯೂನಕೇಷನ್‌ನಲ್ಲಿ(ಎಸ್‌ಒಸಿ) “ದಿ ಕನ್ಸರ್ನ್ಡ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ‘(ಸಿಡಬ್ಲೂéಸಿ) ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುವ “ನಮ್ಮ ಅಂಗಡಿ’ ಎಂಬ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಹೆಪ್ಸಿಭಾ ರಾಣಿ ಅವರು ಶುಕ್ರವಾರ ಉದ್ಘಾಟಿಸಿದರು.

Advertisement

“ಸಾಮಾಜಿಕ ಸೇವೆಯ ಬದ್ಧತೆ ಅಗತ್ಯ. ಮಹಿಳೆಯರು ಮನೆ ಜವಾಬ್ದಾರಿ ನಿರ್ವಹಿಸುವ ಜತೆಗೆ ತಮ್ಮ ಕಾರ್ಯಕ್ಷೇತ್ರ ಹಾಗೂ ಸಾಮಾಜಿಕವಾಗಿಯೂ ಸಮರ್ಥವಾಗಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. 


ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುವುದಕ್ಕಾಗಿ ರೂಪುಗೊಂಡ “ನಮ್ಮ ಭೂಮಿ’ ಸಂಸ್ಥೆಯ ಜತೆಗೆ ಕೈ ಜೋಡಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಎಸ್‌ಒಸಿ ಮಾದರಿ ಕೆಲಸ ಮಾಡುತ್ತಿದೆ. ಇಂತಹ ಮಕ್ಕಳನ್ನು ನಾನು ಮುಂದೆ ಖುದ್ದಾಗಿ ಭೇಟಿಯಾಗಲಿದ್ದೇನೆ’ ಎಂದು ಹೆಪ್ಸಿಬಾ ರಾಣಿ ಹೇಳಿದರು.

ಎಸ್‌ಒಸಿ ನಿರ್ದೇಶಕಿ ಡಾ| ಪದ್ಮಾರಾಣಿ ಅವರು ಮಾತನಾಡಿ “ಕಳೆದ 16 ವರ್ಷಗಳಿಂದ ನಮ್ಮ ಅಂಗಡಿ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ ಕಾರ್ಯಗಳ  ಬಗ್ಗೆ ವಿದ್ಯಾರ್ಥಿಗಳಲ್ಲಿಯೂ ಸಂವೇದನೆ ಬೆಳೆಸುವುದು, ನಮ್ಮ ಭೂಮಿಯ ಮಕ್ಕಳು ಹಾಗೂ ಇತರ ಕರಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಜತೆಗೆ ವಿದ್ಯಾರ್ಥಿ ಗಳಿಗೆ ಮಾರುಕಟ್ಟೆ ಜ್ಞಾನ ಒದಗಿಸುವ ಉದ್ದೇಶದಿಂದ ಇಂತಹ ಪ್ರದರ್ಶನ ಆಯೋಜಿಸಲಾಗುತ್ತಿದೆ’ ಎಂದರು.


ನಮ್ಮ ಭೂಮಿಯ ಕಾರ್ಯನಿರ್ವಾಹಕ ನಿರ್ದೇಶಕ ದಾಮೋದರ ಆಚಾರ್ಯ, ಎಸ್‌ಒಸಿಯ ಉಪನ್ಯಾಸಕಿ ಮಂಜುಳಾ ವೆಂಕಟ ರಾಘವನ್‌ ಉಪಸ್ಥಿತರಿದ್ದರು. ಪ್ರಿಯಾಂಕ ರಾಯ್‌ ನಿರ್ವಹಿಸಿ ಶುಚಿ ರೈ ವಂದಿಸಿದರು. 

ನಮ್ಮಂಗಡಿಯಲ್ಲಿ ಏನೇನಿವೆ? 
ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕಲಾಕೃತಿಗಳು, ಬೆಡ್‌ಶೀಟ್‌, ಅಲಂಕಾರಿಕ ವಸ್ತುಗಳು, ರೆಡಿಮೇಡ್‌ ಬಟ್ಟೆಗಳು, ಆಹಾರ ತಿನಿಸುಗಳು, ನೂತನ ಟ್ರೆಂಡ್‌ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಆಭರಣಗಳು ಹೀಗೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟವಿದೆ. 

Advertisement

Udayavani is now on Telegram. Click here to join our channel and stay updated with the latest news.

Next